ಲಕ್ಷ ಗ್ರಾಹಕರಿಗೆ ಶುದ್ಧನೀರು ನೀಡುವ ಅಭಿಯಾನ

 ದಾವಣಗೆರೆ.ನ.೧೭: ಮಕ್ಕಳು  ಹೆಚ್ಚು ಶುದ್ಧನೀರನ್ನು  ಬಳಕೆ ಮಾಡುವುದರಿಂದ ಆರೋಗ್ಯದ ಬಲವ೯ಧನೆ ಸಾಧ್ಯ ಎಂದು  ಎಮ್‌, ಜಿ,ಎಮ್‌, ಆರ್‌, ನ ಡಿ ಎಡ್‌ ಕಾಲೇಜಿನ ಪ್ರಾಂಶುಪಾಲರಾದ  ಗಂಗಾಧರ  ತಿಳಿಸಿದರು.ಗಾಂಧಿ ನಗರದ ಎಮ್‌, ಜಿ,ಎಮ್‌, ಆರ್‌, ನ ಡಿ ಎಡ್‌ ಕಾಲೇಜಿನ ಆವರಣದಲ್ಲಿ  ನಡೆದ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆದ “ ಶುದ್ಧಜಲ ಅಭಿಯಾನ ” ಕಾಯ೯ಕ್ರಮದ ಜ್ಯೋತಿ ಬೇಳಗಿಸುವ ಮೂಲಕ ಚಾಲನೆ ನೀಡಿದರು. ಪ್ರತಿಯೊಬ್ಬ ಮಕ್ಕಳು ಹೆಚ್ಚು ಹೆಚ್ಚು ಶುದ್ಧನೀರನ್ನು ಬಳಕೆ ಮಾಡಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಲಬೇಕು, ಪ್ರಿತಿಯೊಂದು ನದಿಗಳು ಕಲುಷಿತವಾಗಿರುವುದರಿಂದ  ನದಿಯಿಂದ ಬರುವನೀರನ್ನು ನೇರವಾಗಿ ಕುಡಿಯದೆ, ಶುದ್ಧನೀರಿನ ಘಟಕದ ನೀರನ್ನು ಬಳಕೆ ಮಾಡಿಕೊಳ್ಳಬೇಂದು ತಿಳಿಸಿದರು. ಸಾಕಷ್ಠು ಕಾಯಿಲೆಗಳು ನೀರಿನಿಂದ ಬರುವುದರಿಂದ ಇದರ ಅರಿವನ್ನು ಮನಗಂಡು ಧಮ೯ಸ್ಥಳದ ಧಮಾ೯ಧಿಕಾರಿಗಳಾ ಪೂಜ್ಯ ಡಾ ಡಿ ವಿರೇಂದ್ರ ಹೇಗ್ಗಡೆ ಯವರು ಪ್ರತಿ ಗ್ರಾಮ ಹಾಗೂ ನಗರದಲ್ಲಿ ಶುದ್ಧನೀರಿನ ಘಟಕ ಮಾಡಿರುವುದು ಶ್ಲಾಘನಿಯ ಎಂದು ತಿಳಿಸಿದರು, ಧಮ೯ಸ್ಥಳದಿಂದ ಮಾಡುವ ಕಾಯ೯ಕ್ರಮಗಳು ಅಚ್ಚುಕಟ್ಟು ಅದರ ಸದುಪಯೋಗವನ್ನು ನಾವೆಲ್ಲರು ಪಡೆದುಕೊಳ್ಳಬೇಕೇಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ನೀರಿನ ಸದ್ಬಳಕೆ, ನೀರಿನ ಉಪಯೋಗ, ಪರಿಸರದ ಸ್ವಚ್ಚತೆಯ, ಶುದ್ಧನೀರಿನ ಅರಿವಿನ ಬಗ್ಗೆ ಪ್ರತಿ ಮಕ್ಕಳು ಅರಿತುಕೊಂಡು ಪ್ರತಿ ಮನೆಯಲ್ಲಿ ಶುದ್ಧನಿರನ್ನೆ ಸೇವನೆ ಮಾಡಬೇಂದು ಶಾಲೆಯ  ಶಿಕ್ಷಕರಾದ ಶ್ರೀ ಸವಿತಾ ಶಾಂತಪ್ಪ  ಮಾಹಿತಿ ನೀಡಿದರು.ಕಾಯ೯ಕ್ರಮದ ಮುಖ್ಯ ಅಥಿತಿಯಾಗಿ ಶುದ್ಧಗಂಗಾ ಮೇಲ್ವಿಚಾರಕರಾದ ಶ್ರೀಯುತ ಫಕ್ಕೀರಪ್ಪ ಬೆಲ್ಲಾಮುದ್ದಿ ಮಾತನಾಡಿ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ ಮೂಲಕ ಈಗಾಗಲೆ ನಾವು 324 ಶುದ್ಧನೀರಿನ ಘಟಕವನ್ನು ಪ್ರಾರಂಭ ಮಾಡಿ ಪ್ರತಿದಿನ ಗ್ರಾಹಕರಿಗೆ ಶುದ್ಧನೀರನ್ನು ಪೂರೈಸುತ್ತಿದ್ದೇವೆ, ಈ ತಿಂಗಳ ಶುದ್ಧ ಜಲ ಅಭಿಯಾನ ಕಾಯ೯ಕ್ರಮ ಮಾಡುವ ಮೂಲಕ ಒಂದು ಲಕ್ಷ ಗ್ರಾಹಕರಿಗೆ ಶುದ್ಧನೀರನ್ನು ಒದಗಿಸುವ ಆಶಯವನ್ನು ಇಟ್ಟು ಕೊಂಡಿದ್ದೇವೆ, ಈ ಕಾಯ೯ಕ್ರಮದ ಮೂಲಕ ಘಟಕ ವ್ಯಾಪ್ತೀಯಲ್ಲಿ ಶಾಲಾ ಮಕ್ಕಳಿಗೆ  ಶುದ್ಧ ನೀರಿನ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಆದ್ದರಿಂದ ಪ್ರತಿಯೊಬ್ಬ ಮಕ್ಕಳು  ಶುದ್ಧನೀರನ್ನು ಬಳಕೆ ಮಾಡಿಕೋಳ್ಳಬೇಕೆಂದು ತಿಳಿಸಿದರು.ಕಾಯಕ್ರಮದಲ್ಲಿ ಶಾಲಾ ಶಿಕ್ಷಕರಾಧ ಶ್ರೀಮತಿ ಸುಮಿತ್ರಾ, ಶ್ರೀಮತಿ ಅನೀತಾ,ಸತೀಶ್‌ ಶಾಲೆಯ ಆಡಳಿತಾಧಿಕಾರಿಯಾದ ಶ್ರೀಯುತ ಈಶ್ವರ  ಶುದ್ಧಗಂಗಾ ಪ್ರೇರಕರಾದ ಶ್ರೀಮತಿ ಕೆಂಚ್ಚಮ್ಮ ಹಾಗೂ ಅಮೃತ,  ಶಾಲಾ ಮಕ್ಕಳು ಭಾಗವಹಿಸಿದ್ದರು,