ಲಕ್ಷ್ಮೇಶ್ವರ: ಶಿಕ್ಷಕರ ದಿನಾಚರಣೆ


ಲಕ್ಷ್ಮೇಶ್ವರ,ಸೆ.6: ಗಂಧದಗುಡಿ ಬಳಗ ಹಾಗೂ ಕರ್ನಾಟಕ ಪ್ರಜಾಪರ ವೇದಿಕೆಯ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಲಕ್ಷ್ಮೇಶ್ವರ ಪಟ್ಟಣದ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ಧಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಯ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು…
ಈ ಸಂದರ್ಭದಲ್ಲಿ ಗಂಧದ ಗುಡಿ ಬಳಗದ ಗದಗ ಜಿಲ್ಲಾಧ್ಯಕ್ಷರಾದ ಹಸನ್,ಎನ್, ತಹಶೀಲ್ದಾರ ಮಾತನಾಡಿ ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪಿಸುವಲ್ಲಿ ಹಾಗೂ ದೇಶವನ್ನು ಕಟ್ಟಲು ಸಹ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಶಿಕ್ಷಕರು ನಿಜಕ್ಕೂ ತಾಳ್ಮೆಯ ಮೂರ್ತಿಗಳು ಏನು ಅರಿಯದ ಮಕ್ಕಳಿಗೆ ಪ್ರತಿಯೊಂದನ್ನು ಕಲಿಸಿಕೊಡುವ ಸೇವೆಯನ್ನು ಮಾಡುತ್ತಿದ್ದಾರೆ ಅವರಿಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ಎಂದು ಹೇಳಿದರು ಈ ಸಂಧರ್ಭದಲ್ಲಿ ಮುಖ್ಯೋಪಾಧ್ಯರಾದ ನೀಲಮ್ಮ,ದಾಸಪ್ಪನವರ, ಲಲಿತಾ, ದಾಸಪ್ಪನವರ, ನೇತ್ರಾ,ತಳಗೇರಿ, ಮಂಗಳ ಗೌರಮ್ಮ,ಅಕ್ಕಮ್ಮ, ಕೊರದಾಳ, ರೂಪ, ಸಂಟಿ, ಗೌರವ್ವ, ಹಿರೇಮಠ ,ಮಲ್ಲಪ್ಪ ,ಹೊಂಗಲ್, ಶರೀಫ,ಗುಡಿಮನಿ,ಸುನೀಲಗೌಡ ಪಾಟೀಲ, ಕಿರಣ,ನಡುವಿನಕೇರಿ,ಕಳಕಪ್ಪ,ಬಿಸನಳ್ಳಿ ಹಾಗೂ ಮಕ್ಕಳು ಹಾಜರಿದ್ದರು.