ಲಕ್ಷ್ಮೇಶ್ವರ ಪಟ್ಟಣದ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಲಾಗುವುದು


ಲಕ್ಷ್ಮೇಶ್ವರ,ಎ.22: ಪಟ್ಟಣದ 3ನೇ ಮತ್ತು 16ನೇ ವಾರ್ಡುಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ರಾಮಣ್ಣ ಲಮಾಣಿ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು ಲಕ್ಷ್ಮೇಶ್ವರ ಪಟ್ಟಣದ ವಿವಿಧ ವಾರ್ಡುಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಸುಮಾರು 2 ಕೋಟಿ ಅನುದಾನ ನೀಡಲಾಗಿದ್ದು, ಈ ಅನುದಾನದಲ್ಲಿ ರಸ್ತೆ ಅಭಿವೃದ್ದಿ ಪಡಿಸುವುದು ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. 3 ನೇ ವಾರ್ಡಿನಲ್ಲಿನ ದೂದಪೀರಾಂ ದರ್ಗಾಕ್ಕೆ ಹೊಂದಿಕೊಂಡಿರುವ ಹಳ್ಳದಕೇರಿಯಲ್ಲಿನ ರಸ್ತೆ ಸಾಕಷ್ಟು ಗಲೀಜಿನಿಂದ ಕೂಡಿರುತ್ತಿತ್ತು. ಈ ರಸ್ತೆಯನ್ನು ಕಾಂಕ್ರೀಟ್ ರಸ್ತೆ ಮಾಡುವಂತೆ ವಾರ್ಡಿನ ಸದಸ್ಯರು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು.
ಅದಕ್ಕಾಗಿ ಈ ರಸ್ತೆಯನ್ನು ಅಭಿವೃದ್ದಿ ಪಡಿಸುವುದರಿಂದ ಈ ಓಣಿಯ ಜನರಿಗೆ ಹಾಗೂ ದರ್ಗಾಕ್ಕೆ ಬರುವ ಭಕ್ತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಪಟ್ಟಣದ ಮುಖ್ಯವಾದ ಬಜಾರ್ ರಸ್ತೆಯನ್ನು ಸುಮಾರು 3 ಕೋಟಿ ವೆಚ್ಚದಲ್ಲಿ ಶಿಗ್ಲಿ ಕ್ರಾಸ್‍ನಿಂದ ದೂದಪೀರಾ ದರ್ಗಾದವರೆಗೆ ರಸ್ತೆಯನ್ನು ನಿರ್ಮಿಸುವ ಯೋಜನೆ ಪೂರ್ಣವಾಗಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದ ಅವರು ಶಿರಹಟ್ಟಿ ಮತಕ್ಷೇತ್ರದಲ್ಲಿನ ಪ್ರತಿಯೊಂದು ಗ್ರಾಮಕ್ಕೂ ಶುದ್ದ ಕುಡಿಯುವ ನೀರು ಪೂರೈಸುವ ಜಲ ಜೀವನ ಮಿಶಿನ್ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ಎಲ್ಲ ಹಳ್ಳಿಗಳ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು ಬರುವ ದಿನಗಳಲ್ಲಿ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಕೋವಿಡ್ 2ನೇ ಅಲೆ ಅತ್ಯಂತ ವೇಗವಾಗಿ ಹಬ್ಬುತ್ತಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಜನಸಂದಣಿಯಿಂದ ದೂರ ಇರುವುದನ್ನು ಮಾಡುವ ಜೊತೆಯಲ್ಲಿ ಕೈಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳುವುದು ಹಾಗೂ ಕೆಮ್ಮು, ಜ್ವರ ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದನ್ನು ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಕಾರ್ಯವನ್ನು ಎಲ್ಲರೂ ತಪ್ಪದೆ ಮಾಡಬೇಕು ಎಂದು ಹೇಳಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ, ಶಾಂತವ್ವ ಗುಂಜಳ, ಮಹಾದೇವಪ್ಪ ಅಂದಲಗಿ, ದೇವಣ್ಣ ಬಳಿಗಾರ, ಚೆಂಬಣ್ಣ ಬಾಳಿಕಾಯಿ, ಎಂ.ಆರ್.ಪಾಟೀಲ, ಮಹೇಶ ಹಾದಿಮನಿ, ದುಂಡೇಶ ಕೊಟಗಿ, ಗಂಗಾಧರ ಮೆಣಿಸಿನಕಾಯಿ, ಸೋಮನಗೌಡ ಪಾಟೀಲ, ನಂದೆಣ್ಣವರ, ನಿಂಗಪ್ಪ ಬನ್ನಿ, ಗೋವಿಂದಪ್ಪ ಶೆರಸೂರಿ, ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಇಂಜನೀಯರ್ ಖಾಟೆವಾಲೆ, ನೀಲಪ್ಪ ಹತ್ತಿ, ಈಶ್ವರ ಕೋಣನವರ, ಮಲ್ಲಿಕಾರ್ಜುನ ಓಂಕಾರಿ, ಬಸವೇಶ ಮಹಾಂತಶೆಟ್ಟರ. ಪ್ರವೀಣ ಬೊಮಲೆ, ವಿಜಯ ಕುಂಬಾರ, ಪ್ರಕಾಶ ಮಾದನೂರ, ಬಸವಣ್ಣೆಪ್ಪ ನಂದೆಣ್ಣವರ, ಮಂಜುನಾಥ ಮುದಗಲ್ಲ,