ಲಕ್ಷ್ಮೇಶ್ವರದಲ್ಲಿ 13563 ಜನರಿಗೆ ಲಸಿಕೆ

ಲಕ್ಷ್ಮೇಶ್ವರ, ಮೇ1: ತಾಲೂಕಿನಲ್ಲಿ ಮಾರ್ಚ್ 8 ರಿಂದ ಏಪ್ರಿಲ್ 29 ರವರೆಗೆ ಪಟ್ಟಣ ಸೇರಿದಂತೆ ಯಳವತ್ತಿ, ಶಿಗ್ಲಿ, ಬಾಲೆಹೊಸೂರು, ಸೂರಣಗಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ, ಕುಂದ್ರಲ್ಲಿ ಗ್ರಾಮ ಸೇರಿದಂತೆ ಒಟ್ಟು 13563 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ 5931 ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು ಅದರಲ್ಲಿ 3236 ಜನರಿಗೆ ಲಸಿಕೆ ಹಾಕಲಾಗಿದ್ದು ಪ್ರತಿಶತ 54.5 ಗುರಿ ಸಾಧಿಸಲಾಗಿದೆ. ಅದೇ ರೀತಿ ಯಳವತ್ತಿಯಲ್ಲಿ 3296 ಜನರಿಗೆ ಗುರಿ ಹೊಂದಲಾಗಿತ್ತು ಅದರಲ್ಲಿ 1699 ಜನರಿಗೆ ಶೇಕಡಾ 51.4 ರಷ್ಟು, ಶಿಗ್ಲಿಯಲ್ಲಿ 8616 ಗುರಿ ಹೊಂದಲಾಗಿತ್ತು ಅದರಲ್ಲಿ ಕೇವಲ 3133 ಜನರಿಗೆ ಅಂದರೆ 36.3 ರಷ್ಟು , ಅದೇ ರೀತಿ ಬಾಲೆಹೊಸೂರಿನಲ್ಲಿ 4898 ಗುರಿ ಹೊಂದಲಾಗಿತ್ತು ಅದರಲ್ಲಿ ಗರಿಷ್ಠ 3115 ಜನರಿಗೆ ಲಸಿಕೆ ಹಾಕಿ 63.5 ರಷ್ಟು, ಅದೇ ರೀತಿ ಸೂರಣಗಿಯಲ್ಲಿ 3674 ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು ಅದರಲ್ಲಿ 2037 ಜನರಿಗೆ ಲಸಿಕೆ ಹಾಕಿ 55.4 ರಷ್ಟು, ಕುಂದ್ರಳ್ಳಿ ಗ್ರಾಮದಲ್ಲಿ 1184 ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು ಅದರಲ್ಲಿ ಕೇವಲ 343 ಜನರಿಗೆ ಲಸಿಕೆ ಹಾಕಲಾಗಿದ್ದು ಶೇಕಡಾ 28.9 ರಷ್ಟು ಗುರಿ ಸಾಧಿಸಲಾಗಿದೆ.
ಅಂಕಿ-ಅಂಶಗಳ ಪ್ರಕಾರ 27599 ಜನರಲ್ಲಿ 13563 ಜನರಿಗೆ ಲಸಿಕೆ ಹಾಕಲಾಗಿದ್ದು ಪ್ರತಿಶತ 49.1 ರಷ್ಟು ಸಾಧನೆ ಮಾಡಲಾಗಿದ್ದು ಬಾಲೆಹೊಸೂರು ಗರಿಷ್ಠ 63.5, ಸೂರಣಗಿ 55.4 ರಷ್ಟು ಸಾಧನೆ ಮಾಡಿದ್ದರೆ ಕುಂದ್ರಳ್ಳಿ ಗ್ರಾಮದಲ್ಲಿ ಅತ್ಯಂತ ಕನಿಷ್ಠ 28.9 ರಷ್ಟು ಸಾಧನೆ ಮಾಡಲಾಗಿದೆ.