ಲಕ್ಷ್ಮೇಶ್ವರದಲ್ಲಿ ಮತದಾನ ಚುರುಕು

ಲಕ್ಷ್ಮೇಶ್ವರ,ಡಿ22: ಇಂದು 1 ನೇ ಹಂತದ ಮತದಾನವು ನಡೆಯಲಿದ್ದು, ತಾಲೂಕಿನ 40 ಗ್ರಾಮ ಪಂಚಾಯತಿಗಳಿಗೆ
ಮತದಾನ ಜರುಗಿತು.
ಬೆಳಿಗ್ಗೆಯಿಂದಲೇ ನಿಧಾನಗೊಂಡ ಮತದಾನ 10 ಗಂಟೆ ನಂತರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಕ್ಕೆ ಆಗಮಿಸುತ್ತಿರುವುದು ಕಂಡು ಬಂದಿತು.
ಕೋವಿಡ್ ನಿಯಮಾವಳಿ ಅನ್ವಯವಾಗಿ ಎಲ್ಲ ಗ್ರಾಮಗಳಲ್ಲಿನ ಮತದಾನ ಕೇಂದ್ರಗಳಲ್ಲಿ ಮತದಾರರಿಗೆ ಥರ್ಮಲ್ ಸ್ಕ್ರಿನಿಂಗ್, ಸ್ಯಾನಿಟೈಸ್ ಹಾಗೂ ಕೋವಿಡ ತಪಾಸಣೆ ಮಾಡಿ ಮತದಾರರನ್ನು ಮತದಾನ ಕೇಂದ್ರಕ್ಕೆ ಬಿಡಲಾಯಿತು.
ಇದೇ ಸಂದರ್ಭದಲ್ಲಿ ಶಿಗ್ಲಿಯಲ್ಲಿ ಜಿ.ಪಂ.ಸದಸ್ಯ ಎಸ್.ಪಿ.ಬಳಿಗಾರ ಮತದಾನ ಮಾಡಿದರು.