ಲಕ್ಷ್ಮೀ ನಾರಾಯಣಮಂದಿರದಲ್ಲಿ ಗೋಪೂಜೆ

ಕಲಬುರಗಿ ನ 6: ಇಲ್ಲಿನ ಜಯತೀರ್ಥ ನಗರದ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಬಲಿ ಪಾಡ್ಯ ನಿಮಿತ್ತ ಬ ಡಾವಣೆಯ ಜನರು ಗೋಪೂಜೆ ಮಾಡಿದರು. ಹಿಂದೂ ಧರ್ಮದಲ್ಲಿ
ಗೋವಿಗೆ ತಾಯಿ ಸ್ಥಾನ ಕೊಟ್ಟಿದೆ .ಗೋವಿನಲ್ಲಿ 33 ಕೋಟಿ ದೇವರ ಸ್ಥಾನವಿದ್ದು ಗೋಪೂಜೆ ಮಾಡುವುದರಿಂದ ಅಷ್ಟು ದೇವತೆಗಳಿಗೆ ಪೂಜೆ ಮಾಡಿದಷ್ಟೂ ಪುಣ್ಯ ಬರುತ್ತದೆ ಎಂಬುದು ಪುರಾಣಗಳಲ್ಲಿ ಉಲ್ಲೇಖವಿದೆ ಎಂದು ಭಾರತೀಯ ಗೋಪರಿವಾರದ ರಾಜ್ಯದ ಪ್ರಾಂತ ಕಾರ್ಯದರ್ಶಿ ರವಿ ಲಾತೂರಕರ ನುಡಿದರು.
ಅರ್ಚರ್ಕರಾದ ಶ್ರೀನಿವಾಸ ಆಚಾರ್ಯ,ವಿಜಯಕುಮಾರ ಕಲ್ಲೂರ, ಅನಿಲ ಕುಲಕರ್ಣಿ,ಅಪ್ಪಾ ರಾವ ಟಕ್ಕಳಕಿ,ಸುರೇಶ ಕುಲಕರ್ಣಿ ನೆಲೋಗಿ, ಅಶೋಕ ಮೂಳೂರು,ವಿಠ್ಠಲ ಕುಲಕರ್ಣಿ ಸೇರಿದಂತೆ ಹಲವರಿದ್ದರು.