ಲಕ್ಷ್ಮೀ ಅರುಣ ರೋಡ್ ಶೋ ನೊಂದಿಗೆ ಮತಯಾಚನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 05 : ನಿನ್ನೆ ಸಂಜೆ ನಗರದ  17 ನೇ ವಾರ್ಡಿನ ಗೋನಾಳ್, ಅಂಜಿನಪ್ಪ ನಗರ, ವಿಶಾಲನಗರ, ಹನುಮಾನ್ ನಗರ ಭಾಗಗಳಲ್ಲಿ  ಕೆಆರ್ ಪಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣ ರೋಡ್ ಶೋ ಜೊತೆಗೆ  ಬಹಿರಂಗ ಸಭೆ ನಡೆಸಿ ಮತಯಾಚನೆ ಮಾಡಿದರು.
ಬಳ್ಳಾರಿಯ ಅಭಿವೃದ್ಧಿಯೇ ನಮ್ಮ ಮೂಲಮಂತ್ರ ವಿಶೇಷವಾಗಿ ಮೂಲಸೌಕರ್ಯಗಳಾದ ಒಳಚರಂಡಿ, ನೀರು, ರಸ್ತೆಯ ಬಗ್ಗೆ ವಿಶೇಷ ಗಮನ ಹರಿಸಲಾಗುವುದೆಂದು ಅಭ್ಯರ್ಥಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಗೋನಾಳ ರಾಜಶೇಖರ ಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಹೇಮಲತ, ಪುತ್ರಿ ಬ್ರಹ್ಮಿಣಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ  ಹಂಪಿರಮಣ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಲ್ಲಿಕಾರ್ಜುನ ಆಚಾರ್, ಪಕ್ಷದ ಮುಖಂಡರಾದ ಕೊಳಗಲ್ ಅಂಜಿನಿ,  ಅಸುಂಡಿ ಸೂರಿ, ಪ್ರಕಾಶ್, ರೂಪ, ಗೀತಾರಾಮ್, ರಾಜೇಶ್ವರಿ ಮೊದಲಾದವರು ಪ್ರಚಾರದಲ್ಲಿ ಭಾಗವಹಿಸಿದ್ದರು.