
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.08: ನಗರ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಹೊಂದುತ್ತಿರುವ ಪಕ್ಷ ಅಭ್ಯರ್ಥಿ ಲಕ್ಷ್ಮೀ ಅರುಣಾ ಜನಾರ್ಧನರೆಡ್ಡಿ ಅವರಿಗೆ ಮತದಾರರು ತಿಲಕವಿಟ್ಟು ಸ್ವಾಗತಿಸಿ ಆಶೀರ್ವದಿಸಿದ್ದು ಕಂಡು ಬಂತು.
ಅವರು ಇಂದು ನಗರದ 17 ನೇ ವಾರ್ಡಿನ ಅಂಜಿನಪ್ಪ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದರು. ಮನೆಗೆ ಬಂದ ಅವರನ್ನು ತಿಲಕವಿಟ್ಟು ಸ್ವಾಗತಿಸಿ ಮನೆಯ ಸೊಸೆ ನಿಮಗೆ ನಮ್ಮ ಆಶೀರ್ವಾದ ಇದ್ದೇ ಇದೆಂದರು.
ನಮ್ಮನ್ನು ಗೆಲ್ಲಿಸಿದರೆ. ನಮ್ಮೊಂದಿಗೆ ಸರ್ಕಾರ ರಚನೆಯಾದರೆ ಪ್ರತಿ ತಿಂಗಳು ಮನೆಯ ಮಹಿಳೆಗೆ 2500 ರೂ ನೀಡುವ ಯೋಜನೆ ಇದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ದಾದು, ಅಸುಂಡಿ ಸೂರಿ, ಪ್ರಕಾಶ್, ಅಬ್ದುಲ್ ರಷೀದ್, ಜಾಫರ್ ಸಾಧಿಕ್, ಇಸಾಕ್, ವೀರೇಶ್, ನಾಗಮ್ಮ, ರೂಪಾ, ಫಿರೋಜ್, ಲಕ್ಷ್ಮೀಮ್ಮ, ಬಾನು ಮೊದಲಾದವರು ಇದ್ದರು.