ಲಕ್ಷ್ಮೀಪುರ ಕ್ಲಸ್ಟರ್ ಶಾಲೆಗಳ ಕ್ರೀಡಾಕೂಟ


ಸಂಜೆವಾಣಿ ವಾರ್ತೆ
ಸಂಡೂರು :ಜು:18: ಸಂಡೂರು ಹೋಬಳಿಯ ಲಕ್ಷ್ಮೀಪುರ ಕ್ಲಸ್ಟ್‍ರ ಮಟ್ಟದ ಕ್ರೀಡಾಕೂಟ ಪಟ್ಟಣದ ಎಸ್.ಆರ್.ಎಸ್. ಶಾಲೆಯ ಮೈದಾನದಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳ ಲಕ್ಷ್ಮೀಪುರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ವಲಯ ಮಟ್ಟದಲ್ಲಿ ನಡೆಯಿತು. ಈ ಕ್ರೀಡಾಕೂಟ ಶಿಕ್ಷಕರ ಕಾಲೋನಿಯಲ್ಲಿರುವ ತಹಾ ಇಂಗ್ಲೀಷ್ ಮಾಧ್ಯಮ ಶಾಲಾ ವತಿಯಿಂದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ವಿವಿಧ ಶಾಲೆಯ ಕ್ರೀಡಾಪಟುಗಳು ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಶೋಭೆ ತಂದರು. ತಾ.ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಷಣ್ಮುಖ, ಶಿಕ್ಷಣ ಸಂಯೋಜಕರಾದ ಬಸವರಾಜ, ಪಾಲಾಕ್ಷಪ್ಪ ತಹಾ ಶಾಲೆಯ ಆಡಳಿತಾಧಿಕಾರಿ ನಜೀರ್ ಸಾಬ್ ಮುಖ್ಯ ಶಿಕ್ಷಕಿ ಕೆ.ಎಂ. ಮಂಜುಳಾ ತಾ. ಸರಕಾರಿ ನೌಕರರ ಸಂಘದ ಅಧ್ಯಕ್ಷ ಚೌಕಳಿ ಪರಶುರಾಮಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

Attachments area