ಲಕ್ಷ್ಮೀಪುರ:ಬೇಸಿಗೆ ಶಿಬಿರ

ಕೋಲಾರ, ಮೇ ೨೯- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾ.ಪಂ ಡಿಜಿಟಲ್ ಗ್ರಂಥಾಲಯದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಂಗಮ್ಮ ಅವರು ಬಹುಮಾನ ವಿತರಿಸಿ, ಪ್ರಶಸ್ತಿ ಪತ್ರ ವಿತರಿಸಿದರು. ಬೇಸಿಗೆ ಶಿಬಿರದಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಚಂದ್ರಿಕಾ, ಧನುಷ್, ಅಮೀನ್‌ತಾಜ್, ಕೃತಿಕ, ಎನ್, ಮಧುರ, ಹಾಜೀರರಿಗೆ ಬಹುಮಾನ ಹಾಗೂ ಪ್ರಶಸ್ತಿಪತ್ರ ವಿತರಿಸಿದರು.
ಗ್ರಾ.ಪಂ ಸದಸ್ಯ ಎನ್.ವೆಂಕಟೇಶ್, ಮುಖಂಡ ಪೇಪರ್ ವೆಂಕಟೇಶ್, ಕಿಡ್‌ಪವರ್ ಶಾಲೆಯ ಟ್ರಸ್ಟ್‌ನ ಅಧ್ಯಕ್ಷ ಆರ್.ನಾಗರಾಜ್, ಮುಖ್ಯ ಶಿಕ್ಷಕ ಸುಬ್ರಮಣಿ, ಬಿ.ಎನ್.ವಿನಯ್‌ಕುಮಾರ್, ಗ್ರಂಥಾಪಾಲಕ ಎ.ನಾಗೇಂದ್ರ ಇದ್ದರು.