ಲಕ್ಷ್ಮೀನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಸರಳ ಆಚರಣೆ

ಕೋಲಾರ,ಮಾ.೨೯: ತಾಲ್ಲೂಕಿನ ವೇಮಗಲ್ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮರಥೋತ್ಸವದ ಭಾನುವಾರ ಸರಳವಾಗಿ ನೆರವೇರಿತು.
ವೇಮಗಲ್ ಹೋಬಳಿಯಲ್ಲಿಯೇ ಪ್ರತಿಷ್ಟಿತ ದೇವಾಲಯವಾಗಿರುವ ಇಲ್ಲಿ ಧಾರ್ಮಿಕ ದತ್ತಿ ಇಲಾಖೆ, ಮುಜರಾಯಿ ಇಲಾಖೆ ಆಶ್ರಯದಲ್ಲಿ ನಡೆಯುವ ಬ್ರಹ್ಮ ರಥೋತ್ಸವವಕ್ಕೆ ದಿವಂಗತ ರಾಮಶೆಟ್ಟರ ಕುಟುಂಬದವರಾದ ವಿ,ಆರ್ ನಾಗರಾಜ್ ಮತ್ತು ಮಾಜಿ ಸಭಾಪತಿ ವಿ,ಆರ್ ಸುದರ್ಶನ್ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ನೆಲಸಿರುವ ಎಲ್ಲಾ ದೇವಾಲಯಗಳಲ್ಲೂ ಜಾತಿ ಮತ ಪಂಥಗಳನ್ನೆಲ್ಲ ತೊರೆದು ದೇವಾಲಯಗಳಿಗೆ ದೀಪಾಲಂಕಾರ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಆಗಮ ವಿದ್ವಾನ್ ಶ್ರೀ ಲಕ್ಷ್ಮೀ ನಾರಾಯಣಚಾರ್ ನೇತೃತ್ವದಲ್ಲಿ ಪೂಜೆ ನೆರವೇರಿದ್ದು, ರಥೋತ್ಸವದಲ್ಲಿ ಕಲ್ವಮಂಜಲಿ ಶಂಕರನಾರಾಯಣ್, ನಾಗರಾಜರಾವ್, ಸುಬ್ಬಣ್ಣ, ಹಾರ್ಜೇನಹಳ್ಳಿ ಶ್ರೀನಿವಾಸಮೂರ್ತಿ,ಮದ್ದೇರಿ ಸೊಸೈಟಿ ನಿವೃತ್ತ ಸಿಇಒ ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.