ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಬಾಗಿಲು ಹಾಕಿದ್ದ ಕೆ ಭಕ್ತರ ಆಕ್ರೋಶ

ದಾವಣಗೆರೆ.ಡಿ25:ಕರೊನ ಹಿನ್ನೆಲೆಯಲ್ಲಿ ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ವೈಕುಂಠ ಏಕಾದಶಿ ಮಹೋತ್ಸವಕ್ಕೆ ಅನುಮತಿ ನೀಡದ ಕಾರಣ ಸಂಜೆಯಿಂದ ದೇವಸ್ಥಾನದ ಬಾಗಿಲು ಮುಚ್ಚಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಬೆಳಿಗ್ಗಿನಿಂದ ದೇವಸ್ಥಾನದ ಬಾಗಿಲು ತೆರೆದು ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಆಡಳಿತ ಮಂಡಳಿ ಅನುಕೂಲ ಮಾಡಿಕೊಡಲಾಗಿತ್ತು ಆದರೆ ಕೆಲವರು ದೇವಸ್ಥಾನದ ಆಡಳಿತ ಮಂಡಳಿ ಕರೊನ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲವೆಂದು ಫ್ಲೆಕ್ಸ್ ಹಾಕಿಸಿ ಈಗ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದ್ದಾರೆಂದು ಆರೋಪಿಸಿದ ಕಾರಣ ಜಿಲ್ಲಾಡಳಿತ ದೇವಸ್ಥಾನವನ್ನು ಮಧ್ಯಾಹ್ನ 1ಗಂಟೆಗೆ ಬಂದ್ ಮಾಡುವಂತೆ ಆದೇಶಿಸಿತ್ತು. ಆಡಳಿತ ಮಂಡಳಿ ಕೋರಿಕೆ ಮೇರೆಗೆ ಸಂಜೆ 5ಗಂಟೆಯವರೆಗೆ ದರ್ಶನ ಮಾಡಲು ಅವಕಾಶ ನೀಡಿತ್ತು.5ಗಂಟೆಗೆ ಆಡಳಿತ ಮಂಡಳಿ ಬೀಗ ಹಾಕಿ ಹೊರಟರು, ನಂತರ ಭಕ್ತಾದಿಗಳು ಸಾರ್ವಜನಿಕರು ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಪ್ರತಿಭಟಿಸಿದ ಪೋಲಿಸಿನವರು ಪ್ರತಿಭಟನಾಕಾರರಿಗೆ ನಮ್ಮ ಅಭ್ಯಂತರವಿಲ್ಲ ಎಂದ ನಂತರ ಆಡಳಿತ ಮಂಡಳಿ ಮತ್ತೆ ದೇವಸ್ಥಾನದ ಬಾಗಿಲನ್ನು ಸಂಜೆ 7ಗಂಟೆಗೆ ತೆರವುಗೊಳಿಸಿ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.