ಲಕ್ಷ್ಮಿ ಮಂದಿರ ನಿರ್ಮಿಸಿಕೊಟ್ಟ ಭಗವತಿ ದಂಪತಿ ಸನ್ಮಾನ

ಕಲಬುರಗಿ:ಫೆ.27:ಕಲಬುರಗಿಯ ಹೈಕೋರ್ಟ್ ರಸ್ತೆಯಲ್ಲಿರುವ ಕರುಣೇಶ್ವರ ನಗರದ ಶ್ರೀ ಲಕ್ಷ್ಮಿ ಮಂದಿರವನ್ನು ನಿರ್ಮಿಸಿಕೊಟ್ಟ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಸಂಸ್ಥಾಪಕರು ಹಾಗೂ ಪ್ರಾಂಶುಪಾಲರಾದ ಸಿದ್ದಪ್ಪ ಭಗವತಿ ಹಾಗೂ ವಿವೇಕಾನಂದ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಸುವರ್ಣಾ ಎಸ್.ಭಗವತಿ ದಂಪತಿಯನ್ನು ಬಡಾವಣೆಯ ನಾಗರಿಕರು ಸನ್ಮಾನಿಸಿದರು.
ಬಡಾವಣೆಯ ನಾಗರಿಕರ ಒತ್ತಾಸೆಯ ಮೇರೆಗೆ ಶಾಲೆಯ ಸಮೀಪ ಶಿಥಿಲಾವಸ್ಥೆಯಲ್ಲಿದ್ದ ದೇವಾಲಯಕ್ಕೆ ಹೊಂದಿಕೊಂಡಂತೆ ರೂ.1.50 ಲಕ್ಷ ವೆಚ್ಚದಲ್ಲಿ ಭಗವತಿ ದಂಪತಿ ಹೊಸದಾಗಿ ದೇವಾಲಯ ನಿರ್ಮಿಸುವ ಮೂಲಕ ಸರಳವಾಗಿ ವಿಧಿವತ್ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ಸಹ ಕೈಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಕರುಣೇಶ್ವರ ನಗರ ಬಡಾವಣೆಯ ಜೈ ವೀರ ಹನುಮಾನ ಮಂದಿರದ ಗೌರವಾಧ್ಯಕ್ಷ ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅವಿನಾಶ ಕುಲಕರ್ಣಿ, ಅಧ್ಯಕ್ಷ ಶೇಷಗಿರಿ ಕುಲಕರ್ಣಿ, ಬಡಾವಣೆಯ ಹಿರಿಯರಾದ ಪ್ರೊ.ಎಂ.ಎಚ್.ಹೂಗಾರ್, ಜಿ.ವಿ.ಹಿರೇಮಠ, ಬಾಬುರಾವ್ ಸುಂಟನೂರಕರ್, ಹೃಷಿಕೇಶ ಚೌಡಾಪುರಕರ್ ಹಾಗೂ ವಿಶ್ವಾಸ್ ಮುಘೇಕರ್ ಸೇರಿದಂತೆ ಇನ್ನಿತರರು ಭಗವತಿ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.
ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಮುಖ್ಯಗುರು ಅಂಬಿಕಾ ರೆಡ್ಡಿ, ಶಾಲೆಯ ಶೈಕ್ಷಣಿಕ ಸಮನ್ವಯಾಧಿಕಾರಿ ಸುಮಾ ಎಸ್.ಭಗವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.