ಲಕ್ಷ್ಮಿ ಚಿತ್ರಮಂದಿರದಲ್ಲಿ ಬೆಂಕಿ

ಮೈಸೂರು,ಮಾ18:- ನಗರದ ಲಕ್ಷ್ಮಿ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಆವರಣದಲ್ಲಿ ಇಡಲಾಗಿದ್ದ ಆಸನಗಳು ಅಗ್ನಿ ಗಾಹುತಿಯಾಗಿದೆ.
ಅಗ್ನಿಶಾಮಕ ಸಿಬ್ಬಂದಿ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿ ನಿಂದಿಸಿ ಭಾರಿ ಅನಾಹುತ ತಪ್ಪಿಸಿದ್ದಾರೆ.
ಕರೊನಾ ಹೊಡೆತಕ್ಕೆ ಚಿತ್ರಮಂದಿರ ಸ್ಥಗಿತಗೊಂಡಿತ್ತು. ಕೆಲವು ದಿನಗಳ ಹಿಂದೆ ಡೆಮಾಲಿಷ್ ಕೆಲಸವೂ ಆರಂಭವಾಗಿತ್ತು. ಚಿತ್ರಮಂದಿರದಲ್ಲಿ ಅಳವಡಿಸಲಾಗಿದ್ದ ಆಸನಗಳನ್ನ ಆವರಣದಲ್ಲಿ ರಾಶಿ ರಾಶಿ ತುಂಬಲಾಗಿತ್ತು.
ಇಂದು ಬೆಳಿಗ್ಗೆ ವೆಲ್ಡಿಂಗ್ ಕಾರ್ಯ ನಡೆಯುವ ವೇಳೆ ಬೆಂಕಿ ಕಿಡಿಗಳು ಆಸನಗಳ ರಾಶಿ ಮೇಲೆ ಬಿದ್ದು ಬೆಂಕಿ ವ್ಯಾಪಿಸಿದೆ.
ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ಹತೋಟಿಗೆ ತಂದಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಗಳ ಸಮಯೋಚಿತ ಕಾರ್ಯಾಚರಣೆಯಿಂದ ಅಕ್ಕಪಕ್ಕದ ಕಟ್ಟಡಗಳಿಗೆ ವ್ಯಾಪಿಸಬೇಕಿದ್ದ ಬೆಂಕಿ ಅನಾಹುತವನ್ನ ತಪ್ಪಿಸಿದಂತಾಗಿದೆ.