ಲಕ್ಷ್ಮಣ ಲೇಔಟ್ : ಪದಾಧಿಕಾರಿ ನೇಮಕ

ರಾಯಚೂರು.ನ.09- ನಗರದ ಲಕ್ಷ್ಮಣ ಲೇಔಟ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ನೇಮಕ ನ.08 ರಂದು ಉದಯಕುಮಾರ ಸೂರ್ಯವಂಶಿ ಅವರ ನಿವಾಸದಲ್ಲಿ ಸಭೆ ಸೇರಿ ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಡಾ.ಸೋಮಶೇಖರ ಶ್ಯಾಲೆ, ಉಪಾಧ್ಯಕ್ಷರಾಗಿ ಮಿರ್ಜಾಪುರ ಮಹಾದೇವಪ್ಪ, ಸೈಯದ್ ಬದ್ರುದ್ದೀನ್, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಟಿ. ಶಿವರಾಜ್ ಗೌಡ, ಜಂಟಿ ಕಾರ್ಯದರ್ಶಿ ಶಾಂತಕುಮಾರ ಫುಲ್ಸೆ, ಖಜಾಂಚಿ ಉದಯ್ ಕುಮಾರ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ್, ಸಿ.ಸತ್ಯನಾರಾಯಣ ವರ್ಮಾ, ಕೆ.ಪಿ.ಸುರೇಶ್, ವೈ.ಅನಿಲ್ ಕುಮಾರ್, ಎಸ್.ಶಶಿಕುಮಾರ್, ವಿಜಯ ಶೆಟ್ಟಿ, ಬಿ.ಸಂತೋಷ್, ಪಿ.ಸುಮಂತ್ ಕುಮಾರ್, ಬಿ.ಸುನಿಲ್ ಕುಮಾರ್ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಎ.ಮಾರೆಪ್ಪ ವಕೀಲರು ಹಾಗೂ ಲಕ್ಷ್ಮಣ ಬಡಾವಣೆಯ ಸದಸ್ಯರು ಭಾಗವಹಿಸಿದ್ದರು.