ಲಕ್ಷ್ಮಣ ಬಾರಿಕೇರ್‌ರಿಗೆ ಪತ್ರಿಕೋದ್ಯಮದ ರತ್ನ ರಾಜ್ಯ ಪ್ರಶಸ್ತಿ

ಲಿಂಗಸುಗೂರು.ಡಿ.೦೪-ಪತ್ರಿಕಾ ರಂಗದಲಿ ಸುಮಾರು ೨೫ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಲಕ್ಷ್ಮಣ ಬಾರಿಕೇರ್ ರವರಿಗೆ ಪತ್ರಿಕೋದ್ಯಮ ರತ್ನ ರಾಜ್ಯ ಪ್ರಶಸ್ತಿ ನೀಡಲಾಗುತ್ತಿದೆ.
ಕರ್ನಾಟಕ ರಾಜ್ಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇವರು ಪ್ರತಿವರ್ಷ ಪತ್ರಿಕಾ ಸೇವೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬರುತಿದ್ದು ಅದರಂತೆ ಈ ಸಾಲಿನಲಿ ಲಕ್ಷ್ಮಣ ಬಾರಿಕೇರ್ ರವರಿಗೆ ಪತ್ರಿಕೋದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಸುಮಾರು ೨೫ ವರ್ಷಗಳಿಂದ ತಮ್ಮ ಮೊನಚು ಬರಹಗಳಿಂದ ಸಮಾಜದ ಅಂಕುಡೊಂಕುಗಳ ತಿದ್ದುತಾ ತಾವು ಸೇವೆ ಸಲ್ಲಿಸುತ್ತಿರುವ ಪತ್ರಿಕಾ ರಂಗಕ್ಕೆ ಕಪ್ಪುಚುಕ್ಕೆ ಬರದಂತೆ ತಮ್ಮದೆ ಹಾದಿಯಲಿ ನಡೆಯುತ್ತಿರಯವ ಸರಳಜೀವಿ ಲಕ್ಷ್ಮಣ ಬಾರಿಕೇರ್ ರವರಿಗೆ ಈಗಾಗಲೆ ಹಲವಾರು ಪ್ರಶಸ್ತಿಗಳು ಬಂದಿವೆ.
ಡಿ.೦೫ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಪ್ರಶಸ್ತಿ ವಿತರಣಾಸಮಾರಂಭ ನಡೆಯುತಿದ್ದು ಮಹನೀಯರಿಗೆ ಅಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪತ್ರಿಕೋದ್ಯಮ ರತ್ನ ರಾಜ್ಯ ಪ್ರಶಸ್ತಿ ಪಡೆಯುತ್ತಿರುವ ಲಿಂಗಸುಗೂರು ತಾಲೂಕಿನ ಹಿರಿಯ ಪತ್ರಕರ್ತ ಹಾಗೂ ಕಲ್ಯಾಣ ಕರ್ನಾಟಕ ಪತ್ರಿಕೆಯ ಸಂಪಾದಕ ಲಕ್ಷ್ಮಣ್ ಬಾರಿಕೇರ ಮತ್ತು ಯುವ ಪತ್ರಕರ್ತ ವಿವಿಧ ಪತ್ರಿಕೆಗಳ ಏಜೆಂಟ್ ಸುಮಾರು ೨೦ ವರ್ಷಗಳಿಂದ ಪತ್ರಿಕೆ ಮಾರಾಟ ಮಾಡುವ ಮೂಲಕ ಜನ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಸಾದತ್ ಅಲಿ ಇವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ ಇದರಿಂದಾಗಿ ಈ ಇಬ್ಬರು ಪತ್ರಕರ್ತರು ಲಿಂಗಸುಗೂರಿನ ಕಿರ್ತಿ ಹೆಚ್ಚಿಸುವ ಮೂಲಕ ತಮ್ಮದೇ ಆದ ರೀತಿಯಲ್ಲಿ ವರದಿಗಳನ್ನು ಬಿತ್ತರಿಸಿ ಯಾವುದೇ ಕಳಂಕವಿಲ್ಲದೆ ಪತ್ರಿಕಾ ವೃತ್ತಿಯನ್ನು ದೇವರ ವೃತ್ತಿ ಎಂದು ನಂಬಿ ಸಾರ್ವಜನಿಕರಿಗೆ ಉತ್ತಮ ವರದಿಗಳನ್ನು ಮಾಡುವ ಮುಖಾಂತರ ಲಿಂಗಸುಗೂರು ತಾಲೂಕಿನಲ್ಲಿ ಚಿರಪರಿಚಿತ ಪತ್ರಕರ್ತರು ಎಂಬುದನ್ನು ಮರೆಯುವಂತಿಲ್ಲ ಈ ಸಂದರ್ಭದಲ್ಲಿ ಅವರ ಒಡನಾಡಿಗಳು ಹಿತೈಷಿಗಳು ಪತ್ರಿಕಾ ಮಿತ್ರರು ಅಭಿಮಾನಿಗಳು ಸೇರಿದಂತೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.