ಲಕ್ಷಿದೇವಿಯ ಪುರಪ್ರವೇಶದಲ್ಲಿ ಮಿಂದೆದ್ದ ಆನೂರ ಭಕ್ತರು

ಅಫಜಲಪುರ: ನ.6:ಲಕ್ಷ್ಮಿದೇವಿಯ ಪುರಪ್ರವೇಶ ಕಾರ್ಯಕ್ರಮದ ವೈಭವದಲ್ಲಿ ಭಕ್ತಸಮೂಹ ಮಿಂದೆದ್ದ ಸಂಭ್ರಮ ತಾಲೂಕಿನ ಆನೂರನಲ್ಲಿ ನಡೆಯಿತು.

ಆನೂರ ಗ್ರಾಮದ ಲಕ್ಷ್ಮಿದೇವಿಯ ದೇವಸ್ಥಾನದಲ್ಲಿ ನೂತನ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಅನೇಕ ದಿನಗಳಿಂದ ಯೋಜಿಸಲಾಗಿದ್ದು ದೇವಿಯ ಭಕ್ತರೆಲ್ಲ ಕೂಡಿಕೊಂಡು ನೂತನ ಮೂರ್ತಿಯನ್ನು ನ.4ರಂದು ಗ್ರಾಮದ ಸೀಮಾಂತರದಲ್ಲಿ ತಂದು ಇಡೀ ರಾತ್ರಿ ಭಜನೆ ಕಾರ್ಯಕ್ರಮ ಮಾಡಿ ನ.5ರಂದು ಬೆಳಿಗ್ಗೆ ದೇವಿ ಮೂರ್ತಿಗೆ ಪೂಜೆ ಸಲ್ಲಿಸಿ ಪುರ ಪ್ರವೇಶ ಮಾಡಿಸಲಾಯಿತು.

ಈ ವೇಳೆ ಡೊಳ್ಳು ಕುಣಿತ, ಭಜನಾ ತಂಡಗಳಿಂದ ಭಜನೆ ಮಾಡುವ ಮೂಲಕ ದೇವಿಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಚಂದ್ರಗಿರಿ ದೇವಿಯ ಅರ್ಚಕ ರಾಹುಲ ಪೂಜಾರಿ ಭಂಡಾರಿ ಹಾಗೂ ಗ್ರಾಮದ ಪ್ರಮುಖರು ಭಕ್ತರು ಭಾಗಿಯಾಗಿದ್ದರು.

ನ.5ರಿಂದ 11 ರವರೆಗೆ ಐದು ದಿನ ನಿತ್ಯ ಬಡದಾಳದ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹಾಗೂ ಚಿಂಚೋಳಿಯ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರ ನೇತೃತ್ವದಲ್ಲಿ ಹಿತ್ತಲ ಶಿರೂರಿನ ಶರಣಕುಮಾರ ಶಾಸ್ತ್ರಿ ಅವರಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.

ನ.10 ಶುಕ್ರವಾರದಂದು ಬೆಳಿಗ್ಗೆ 6.15ಕ್ಕೆ ಚಂಡಿಕಾಹೋಮ, ನವಗ್ರಹ, ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ದೇವಿ ಪೂಜೆ ನೇರವೇರಲಿದೆ. 11 ಗಂಟೆಗೆ ಹರಗುರುಚರಮೂರ್ತಿಗಳ ಸಾನಿಧ್ಯದಲ್ಲಿ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.

ಉಡಿ ತುಂಬುವ ಕಾರ್ಯಕ್ರಮದ ಬಳಿಕ ಬಡದಾಳ, ಚಿಂಚೋಳಿ ನೇತೃತ್ವದಲ್ಲಿ ಧಾರ್ಮಿಕ ಸಭೆ ಜರುಗಲಿದ್ದು ಧಾರ್ಮಿಕ ಸಭೆಯಲ್ಲಿ ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರು, ಗೋಳಸಾರದ ಪುಂಡಲಿಂಗ ಮಹಾ ಶಿವಯೋಗಿಗಳು, ಕುಮಸಗಿಯ ಶಿವಾನಂದ ಶಿವಾಚಾರ್ಯರು, ಇಂಡಿ-ಕವಲಗಿಯ ಡಾ. ಸ್ವರೂಪಾನಂದ ಮಹಾಸ್ವಾಮಿಗಳು, ಮಲ್ಲಾಬಾದನ ರೇವಣಸಿದ್ದ ಶಿವಾಚಾರ್ಯರು, ರೇವೂರ-ನಾಗಣಸೂರಿನ ಶ್ರೀಕಂಠ ಶಿವಾಚಾರ್ಯರು, ಚಿನ್ಮಯಗಿರಿಯ ವೀರಮಹಾಂತ ಶಿವಾಚಾರ್ಯರು, ಅಫಜಲಪುರದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸೇರಿದಂತೆ ಅನೇಕ ಮಠಗಳ ಹರಗುರುಚರಮೂರ್ತಿಗಳು ಭಾಗಿಯಾಗಲಿದ್ದಾರೆ.

ಐದು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ನದಾಸೋಹ, ವಿವಿಧ ಭಜನಾ ಮೇಳಗಳಿಂದ ಭಜನೆ, ಡೊಳ್ಳಿನ ಪದಗಳು ನಡೆಯಲಿವೆ. ಆನೂರ, ಬಿಲ್ವಾಡ, ದೇಸಾಯಿ ಕಲ್ಲೂರ, ತೆಲ್ಲೂರ, ಮಾತೋಳಿ, ಮಲ್ಲಾಬಾದ, ಬಟಗೇರಾ, ಕೆರಕನಗಳ್ಳಿ, ಘೂಳನೂರ, ಅಫಜಲಪುರ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳ ಭಕ್ತರು ಲಕ್ಷ್ಮಿದೇವಿಯ ಸಂಭ್ರಮದಲ್ಲಿ ಭಾಗಿಯಾಗಿ ಪುನೀತರಾಗಬೇಕೆಂದು ದೇವಸ್ಥಾನ ಕಮೀಟಿಯವರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಪಾವಡಯ್ಯ ಸ್ವಾಮಿ, ಮಹಾಂತಯ್ಯ ಮಲಘಾಣ, ಕಲ್ಯಾಣಿ ಜಿರೋಳಿ, ಚಂದಣ್ಣಗೌಡ ಪಾಟೀಲ್, ರಾಜು ಜಿರೋಳಿ, ನಿಂಗಣ್ಣ ಕಲಶೆಟ್ಟಿ, ಹಣಮಂತ ಖ್ಯಾದಾಗೋಳ, ಬಾಬು ತಳವಾರ, ರೇವಣಸಿದ್ದ ಕಲಶೆಟ್ಟಿ, ಪರೇಪ್ಪ ಪೂಜಾರಿ, ಸುಭಾಷ ತಳವಾರ, ಬಸಣ್ಣ ದೇವರಮನಿ, ಅಂಬರೀಷ ಪಟ್ಟಣ, ಗುಂಡು ಮಾಳಗೆ, ಶ್ರೀಮಂತ ಸಿಂಗೆ, ಸಿದ್ರಾಮ ಸಿಂಗೆ, ಧೂಳಪ್ಪ ಪೂಜಾರಿ, ಸೈಯದ್ ಮುಲ್ಲಾ, ಬಸು ಕೆರಮಗಿ, ಗುರುದೇವ ಸುತಾರ, ಶಾಮರಾವ ಜಿರೋಳಿ, ಚಂದ್ರಕಾಂತ ಸೀತನೂರ, ಶಿವಕುಮಾರ ಪಾಟೀಲ್, ಹಣಮಂತ ನಾವಿ, ಸುರೇಶ ಮಾಲಿಪಾಟೀಲ್, ಬಲಭೀಮ ಬಳೂಂಡಗಿ, ದತ್ತಪ್ಪ ಗೌಂಡಿ, ಚಂದ್ರಕಾಂತಗೌಡ ಮಾಲಿಪಾಟೀಲ್, ಗುರುಶಾಂತ ಕಲಶೆಟ್ಟಿ, ಮಾಂತು ತಳವಾರ, ಶರಣಪ್ಪ ಪೂಜಾರಿ, ಭೋಗಣ್ಣಗೌಡ ರೂಗಿ, ಶೇಖರಗೌಡ ಪಾಟೀಲ್, ಮಡಿವಾಳಯ್ಯ ಸ್ವಾಮಿ, ಮನೋಹರ ಹಿಪ್ಪರಗಿ, ಮಲ್ಲಣಗೌಡ ಮಾಲಿಪಾಟೀಲ್ ಅನೇಕರು ಇದ್ದರು.