ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ

ಬೆಂಗಳೂರು,ಡಿ.೧೦- ಬುಡಬುಡಿಕೆ ವೇಷಧಾರಿಯಾಗಿ ಬಂದು ಖತರ್ನಾಕ್ ಖದೀಮನೋರ್ವ ಮಹಿಳೆಯೊಬ್ಬರ ಪ್ರಜ್ಞೆ ತಪ್ಪಿಸಿ ಚಿನ್ನಾಭರಣವನ್ನು ಕಳವು ಮಾಡಿರುವ ದುರ್ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬುಡುಬುಡಿಕೆ ಆಡಿಸುತ್ತಾ ಭವಿಷ್ಯ ಹೇಳುವ ನೆಪದಲ್ಲಿ ಪರಪ್ಪನ ಅಗ್ರಹಾರದ ಮನೆಯೊಂದರ ಬಳಿ ಖದೀಮ ಮಹಿಳೆ ಕಾಂತಾ ಅವರಿಗೆ ಅಮಾವಾಸ್ಯೆ ಬಳಿಕ ನಿನ್ನ ಪತಿ ಹಾಗೂ ಮಗನಿಗೆ ಗಂಡಾಂತರ ಇದೆ. ಮನೆಯಲ್ಲಿ ಸಾವಾಗಲಿದೆ ಎಂದು ಹೆದರಿಸಿದ್ದಾನೆ. ಗಂಡಾಂತರ ಪರಿಹಾರಕ್ಕೆ ೧,೫೦೦ ಹಣವನ್ನು ಕೇಳಿದ ಖದೀಮ ನಿಂಬೆ ಹಣ್ಣು ತರಲು ಹೇಳಿ ಮಂತ್ರಿಸಿ ಕಾಂತಾಗೆ ನೀಡಿದ್ದಾನೆ.
ನಿಂಬೆ ಹಣ್ಣು ಹಿಡಿದುಕೊಂಡು ಮೂರು ಸುತ್ತುವಂತೆ ಹೇಳಿದ್ದು ಸುತ್ತು ಹಾಕುತ್ತಿದ್ದ ಕಾಂತ ಅವರು ಮೂರ್ಛೆ ತಪ್ಪಿ ಕೆಳಗೆ ಬಿದ್ದಿದ್ದಾರೆ.ಕೂಡಲೇ ಮನೆಯಲ್ಲಿದ್ದ ಒಡವೆ ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿವಿಧ ಪೊಲೀಸ್ ಠಾಣೆಯಲ್ಲಿ ಇದೇ ರೀತಿಯಾಗಿ ಸುಮಾರು ಎಂಟು ಪ್ರಕರಣಗಳು ದಾಖಲಾಗಿದೆ. ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಬೈಕ್ ಕಳವು:
ಯಾರಿಗೂ ಅನುಮಾನ ಬಾರದಂತೆ ದ್ವಿಚಕ್ರ ವಾಹನವನ್ನು ಜಯನಗರ ೪ನೇ ಹಂತದಲ್ಲಿ ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿದ್ದಾರೆ. ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.
ಟಾರ್ಪಲ್ ಕದ್ದ ಕಳ್ಳ:
ಬೆಂಗಳೂರಿನಲ್ಲಿ ಚಿತ್ರ-ವಿಚಿತ್ರ ಕಳ್ಳರಿದ್ದು, ಗೂಡ್ಸ್ ಆಟೋದಲ್ಲಿ ಬಂದು ಲೋಡ್ ಗಟ್ಟಲೇ ಸಿಮೆಂಟ್‌ಗೆ ಮುಚ್ಚಿದ್ದ ಟಾರ್ಪಲ್ ಕಳ್ಳತನ ಮಾಡುವ ದೃಶ್ಯ ಸಿಸಿಟಿಟಿಯಲ್ಲಿ ಸೆರೆಯಾಗಿದೆ. ಕದ್ದ ಟಾರ್ಪಲ್‌ನಲ್ಲೇ ಗಾಡಿ ನಂಬರ್ ಪ್ಲೇಟ್ ಕಾಣದಂತೆ ಮುಚ್ಚಿ ಪರಾರಿಯಾಗಿದ್ದಾನೆ. ನಾಗರಬಾವಿಯ ಮಾಳಗಾಳದಲ್ಲಿ ನಿನ್ನೆ ರಾತ್ರಿ ೧ ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ೧೯ ಸಾವಿರ ರೂ. ಮೌಲ್ಯದ ಟಾರ್ಪಲ್ ಕದ್ದಿದ್ದಾನೆ.