ಲಕ್ಷಾಂತರ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಚಾಂಗಲೇರಾ ವೀರಭದ್ರೇಶ್ವರ :ಡಾ ಶೈಲೇಂದ್ರ ಬೆಲ್ದಾಳೆ

ಚಿಟಗುಪ್ಪ :ತಾಲ್ಲೂಕಿನ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸುಕ್ಷೇತ್ರ ಚಾಂಗಲೇರಾ ಪುಣ್ಯಕ್ಷೇತ್ರವಾಗಿದೆ. ಇಲ್ಲಿರುವ ವೀರಭದ್ರೇಶ್ವರ ದೇವರ ಮಹಿಮೆ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಡಾ ಶೈಲೇಂದ್ರ ಬೆಲ್ದಾಳೆ, ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸುಕ್ಷೇತ್ರ ಚಾಂಗಲೇರಾ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಮಾತ್ರವಲ್ಲದೇ ಪಕ್ಕದ ರಾಜ್ಯಗಳಾದ ಆಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ರಾಷ್ಟ್ರದ ವಿವಿಧೆಡೆಯಿಂದ ಲಕ್ಷಾಂತರ ಜನ ಭಕ್ತರು ವೀರಭದ್ರೇಶ್ವರ ದೇವರ ಸನ್ನಿಧಿಗೆ ಬರುತ್ತಾರೆ ಎಂದರೇ ಅದು ವೀರಭದ್ರೇಶ್ವರ ದೇವರ ಮಹಿಮೆಯಿಂದ ಸಾಧ್ಯವಾಗಿದೆ ಎಂದರು.

ಜಾತ್ರಾ ಮಹೋತ್ಸವ ಕೂಡ 2 ವರ್ಷ ಆದ ಮೇಲೆ ಈ ಬಾರಿ ಅದ್ಧೂರಿಯಾಗಿ ಜಾತ್ರೆ ನಡೆಯುತ್ತಿದೆ ಸಂಸ್ಕøತಿ ಸಭ್ಯತೆಗೆ ವಿಶೇಷ ಸ್ಥಾನಮಾನ ಹೊಂದಿರುವ ಏಕೈಕ ದೇಶ ಅದು ಭಾರತ ಅನೇಕ ಹಿಂದಿನ ಹಿರಿಯರು ಜಾತ್ರಾ ಮಹೋತ್ಸವಗಳು ಆಚರಿಸುತ್ತಾ ಬಂದಿದ್ದಾರೆ,
ಇವುಗಳಿಂದಾಗಿ ಜಾತಿ ಧರ್ಮಗಳ ನಡುವಿನ ವೈಮನಸ್ಸು ಮರೆತು ಎಲ್ಲರೂ ಒಗ್ಗಟ್ಟಾಗಿ ಬೆರೆಯುವಂತಾಗಲು, ಈ ಜಾತ್ರಾ ಮಹೋತ್ಸವಗಳು ಸಹಕಾರ ಆಗುತ್ತದೆ ಅಲ್ಲದೇ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನವು ಶತಮಾನಗಳಿಂದ ವೀರಭದ್ರೇಶ್ವರ
ಈ ಸ್ಥಾನದಲ್ಲಿ ನೆಲೆಸಿ ನೆರೆ ಹೊರೆ ರಾಜ್ಯಗಳಿಂದ ನಮ್ಮ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿ
ಈ ದೇವರಲ್ಲಿದೆ ಮುಂಬರುವ ದಿನಗಳಲ್ಲಿ

ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ನಿಸ್ವಾರ್ಥದಿಂದ ಪ್ರಯತ್ನ ಪಡುತ್ತೇನೆ ಹಾಗೂ.
ಈ ಕ್ಷೇತ್ರವು ರಾಜ್ಯಕ್ಕೆ ಮಾದರಿ ಐತಿಹಾಸಿಕ ಧಾರ್ಮಿಕ ಕೇಂದ್ರವನ್ನಾಗಿಸಲು ಘನ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಎಂದು ತಿಳಿಸಿದರು.