ಲಕ್ಷಶಿವಲಿಂಗು, ಮುಕ್ತಿನಾಗ ಪ್ರತಿಷ್ಠಾಪನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.2: ಶ್ಯಾಗಲೆ ಗ್ರಾಮದ ಕೋಡಿಹಳ್ಳಿ ರಸ್ತೆಯ ಹಳೆ ಮಹೇಶ್ವರ ತೋಟದ ಬನದಲ್ಲಿ ಈಚೆಗೆ ಶ್ರೀಶೈಲ ಮಲ್ಲಿಕಾರ್ಜುನ ಮಹಾಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಲಕ್ಷಶಿವಲಿಂಗು ಪ್ರತಿಷ್ಠಾಪನೆ ಕಾರ್ಯಕ್ರಮವು ಜರುಗಿತು.ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ದುಗ್ಗಾವತಿಯ ವೀರಭದ್ರೇಶ್ವರ ಮಹಾಸ್ವಾಮೀಜಿ, ಕಂಚಿಕೆರೆಯ ಬಿದ್ದಹನುಮಪ್ಪನಮಟ್ಟಿ ಬಸವರಾಜ ಸ್ವಾಮೀಜಿ ಸಮ್ಮುಖದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗಂಗಾ ಪೂಜೆ, ಗಣಪತಿ ಪೂಜೆ, ಗುರುಪಾದೋಕ, ಮಹಾರುದ್ರಾಭಿಷೇಕ, ಅಲಂಕಾರ ಅಷ್ಟೋತ್ತರ, ಪ್ರಾಣ ಪ್ರತಿಷ್ಠಾಪನೆ ನಡೆಯಿತು