ಲಕ್ನೋ ವಿಮಾನ ನಿಲ್ದಾಣ 4 ತಿಂಗಳು ಕಾರ್ಯಾಚರಣೆ ಸ್ಥಗಿತ

ಲಕ್ನೋ,ಜ.22- ಉತ್ತರ ಪ್ರದೇಶದ ಲಕ್ನೋ ವಿಮಾನ ನಿಲ್ದಾಣದ ರನ್ ವೇ ನವೀಕರಕ್ಕಾಗಿ ಫೆಬ್ರವರಿ 23 ರಿಂದ 4 ತಿಂಗಳ ಕಾಲ ರಾತ್ರಿ ವಾಣಿಜ್ಯ ವಿಮಾನ ಕಾರ್ಯಾಚರಣೆ ನಿಲ್ಲಿಸಲು ನಿರ್ದರಿಸಿದೆ.

ಲಕ್ನೋ ವಿಮಾನ ನಿಲ್ದಾಣ ಎಂದು ಜನಪ್ರಿಯವಾಗಿರುವ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಅಸ್ತಿತ್ವದಲ್ಲಿರುವ ರನ್‍ವೇ ನವೀಕರಿಸಲು ಫೆಬ್ರವರಿ 23 ರಿಂದ ಜುಲೈ 11 ರವರೆಗೆ ರಾತ್ರಿ ವಿಮಾನ ಕಾರ್ಯಾಚರಣೆ ನಿಲ್ಲಿಸಲು ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಅಸ್ತಿತ್ವದಲ್ಲಿರುವ 4.5 ದಶಲಕ್ಷ ಪ್ರಯಾಣಿಕರಿಂದ ವರ್ಷಕ್ಕೆ 39 ದಶಲಕ್ಷ ಪ್ರಯಾಣಿಕರ ನಿರ್ವಹಣಾ ಸಾಮಥ್ರ್ಯ ಮತ್ತು ವರ್ಷಕ್ಕೆ 0.25 ದಶಲಕ್ಷ ಟನ್‍ಗಳಷ್ಟು ಸರಕು ನಿರ್ವಹಣೆ ಸಾಮಥ್ರ್ಯ ಹೆಚ್ಚಿಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ವಿಮಾನ ನಿಲ್ದಾಣ ಪರಿಸರ ಅನುಮತಿ ಪಡೆದುಕೊಂಡಿದೆ.

ವಿಮಾನ ನಿಲ್ದಾಣವನ್ನು ಮುಚ್ಚುವ ಸಮಯದಲ್ಲಿ ರಾತ್ರಿ 9.30 ರಿಂದ ಬೆಳಿಗ್ಗೆ 6 ರವರೆಗೆ ಯಾವುದೇ ವಿಮಾನ ಕಾರ್ಯಾಚರಣೆ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಕ್ನೋ ವಿಮಾನ ನಿಲ್ದಾಣ ಪ್ರಯಾಣಿಕರ ಮತ್ತು ಸರಕು ಹರಿವಿನ ಸಂಖ್ಯೆಯಲ್ಲಿನ ಹೆಚ್ಚಳದೊಂದಿಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಅದರ ಅಸ್ತಿತ್ವದಲ್ಲಿರುವ ರನ್‍ವೇ ವಿಸ್ತರಣೆ ಮತ್ತು ಉನ್ನತೀಕರಣ ಕಾರ್ಯವನ್ನು ಕೈಗೊಳ್ಳುತ್ತದೆ.

“ನಾಲ್ಕು ತಿಂಗಳ ಅವಧಿಯಲ್ಲಿ, ಏರ್‍ಸೈಡ್‍ನಲ್ಲಿ ಮೂಲಸೌಕರ್ಯಗಳನ್ನು ನವೀಕರಿಸಲು ವಿಮಾನ ನಿಲ್ದಾಣವು ವಿವಿಧ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಲಿದೆ, ಇದರಲ್ಲಿ ಮೂರು ಹೊಸ ಲಿಂಕ್ ಟ್ಯಾಕ್ಸಿವೇಗಳ ಪರಿಚಯ, ವಿಮಾನ ಕಾರ್ಯಾಚರಣೆಗೆ ಹೊಸ ನೆಲದ ದೀಪಗಳು, ರನ್‍ವೇ ಎಂಡ್ ಸುರಕ್ಷತಾ ಪ್ರದೇಶವನ್ನು ಪರಿಚಯಿಸಲಾಗಿದೆ. ಮರಳು ಮತ್ತು ವಿಮಾನ ಟರ್ನ್ ಪ್ಯಾಡ್ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.