ಲಂಬಾಣಿ ಸಮಾಜದ ಧರ್ಮಗುರು ವಿಧಿವಶ :ಗೋವಿಂದಗಿರಿ ತಾಂಡಾದಲ್ಲಿ ಶ್ರದ್ದಾಂಜಲಿ.

ಕೂಡ್ಲಿಗಿ.ನ. 1:- ಲಂಬಾಣಿ ಸಮಾಜದ ನಡೆದಾಡುವ ದೇವರು,ಧರ್ಮಗುರು ಹಾಗೂ ಆರಾಧ್ಯ ದೈವ ರಾಮರಾವ ಮಹಾರಾಜಾರು ಇಂದು ಮುಂಬೈಯಲ್ಲಿ ವಿಧಿವಶರಾಗಿದ್ದು ಅವರಿಗೆ ಕೂಡ್ಲಿಗಿ ತಾಲೂಕಿನ ಗೋವಿಂದಗಿರಿತಾಂಡಾದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಗೋವಿಂದಗಿರಿತಾಂಡಾದ ಸಂತ ಸೇವಾಲಾಲ್ ದೇವಸ್ಥಾನದಲ್ಲಿ ಪೂಜಾಕಾರ್ಯ ನೆರವೇರಿಸಿದ ಪೂಜಾರಿ ಶೇಖರನಾಯ್ಕ್ ಹಾಗೂ ತಾಂಡಾದ ಹಿರಿಯ ಮುಖಂಡರು ಲಂಬಾಣಿ ಸಮಾಜದ ಧರ್ಮಗುರುಗಳಾಗಿದ್ದ ರಾಮರಾವ ಮಹಾರಾಜರು ನಡೆದಾಡುವ ದೇವರಾಗಿದ್ದರು ಅಲ್ಲದೆ ಸಮಾಜದ ಏಳ್ಗೆ ಗೆ ಮಾರ್ಗದರ್ಶಕರಾಗಿದ್ದರು ಅಲ್ಲದೆ ನಮ್ಮ ಸಮಾಜದ ಆರಾಧ್ಯ ದೈವವೆಂದೇ ಹೇಳಬಹುದಾಗಿದ್ದು ಅವರು ಇಂದು ಮುಂಬೈ ಖಾಸಗಿ ಆಸ್ಪತ್ರೇಲಿ ವಿಧಿವಶರಾಗಿದ್ದು ಇವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ರಾಮರಾವ ಮಹಾರಾಜರ ಭಾವಚಿತ್ರಕ್ಕೆ ಪೂಜಾ ವಿಧಿವಿಧಾನದಲ್ಲಿ ತಾಂಡಾದ ಮಹಿಳೆಯರು ಸೇರಿದಂತೆ ಗ್ರಾಮದ ಜನತೆ ಶ್ರದ್ದಾಂಜಲಿ ಅರ್ಪಿಸಿದರು.