ಲಂಬಾಣಿ ಯುವತಿಯರ ದೀಪಾವಳಿ ಸಂಭ್ರಮ

ಚಿತ್ತಾಪುರ:ನ.17: ಹಬ್ಬದಂದು ಮನೆಯ ಮುಂದೆ ದೀಪಗಳ ಸಾಲು, ನಾನಾ ಭಕ್ಷ್ಯಗಳನ್ನು ಸವಿದು ಪಟಾಕಿ ಸಿಡಿಸಿ ಸಂಭ್ರಮಿಸುವುದು ಬೆಳಕಿನ ಹಬ್ಬ ದೀಪಾವಳಿಯ ವಿಶೇಷತೆ. ಆದರೆ ಇದಕ್ಕೆ ವಿಭಿನ್ನ ಎಂಬಂತೆ ಕೈಯಲ್ಲಿ ಬಿದರಿನ ಬುಟ್ಟಿ ಹಿಡಿದು ಹಲಗೆಯ ನಾದಕ್ಕೆ ಹೆಜ್ಜೆ ಹಾಕುತ್ತಾ ಹಾಡಿನ ಮೂಲಕ ದೀಪಾವಳಿ ಸಂಭ್ರಮವನ್ನು ಲಂಬಾಣಿ ಯುವತಿಯರು ಆಚರಿಸಿದರು.

ಪಟ್ಟಣದ ನಾಗಾವಿ ಯಲ್ಲಮ್ಮ ದೇವಸ್ಥಾನದ 60 ಕಂಬದ ಗುಡಿ ಆವರಣದಲ್ಲಿ ಲಂಬಾಣಿ ಯುವತಿಯರು ಹಾಗೂ ಸಣ್ಣ ಹುಡುಗಿಯರು ರಂಗುರಂಗಿನ ಉಡುಪು ಧರಿಸಿ ಅಲಂಕಾರ ಮಾಡಿಕೊಂಡು ಬುಟ್ಟಿಯಲ್ಲಿ ತುಂಬಿಕೊಂಡು ಹಲಗೆಯ ನಾದಕ್ಕೆ ಹೆಜ್ಜೆ ಹಾಕುತ್ತಾ ನೃತ್ಯವನ್ನೂ ಮಾಡಿ ಹಾಡಿನ ರೂಪದಲ್ಲಿ ದೀಪಾವಳಿ ಹಬ್ಬ ಎಲ್ಲರ ಬಾಳಲ್ಲಿ ಹೊಸತನ ತರಲಿ ಎಂದು ಪ್ರಾರ್ಥಿಸಿದರು.

ಬಣ್ಣ ಬಣ್ಣದ ಉಡುಗೆ ತೊಟ್ಟಿದ್ದ ಲಂಬಾಣಿ ಯುವತಿಯರು ತಮಟೆ ತಾಳಕ್ಕೆ ಅನುಣವಾಗಿ ನೃತ್ಯ ಮಾಡುವುದು ನೋಡುಗರಲ್ಲಿ ಸಂಭ್ರಮ ಉಂಟು ತರತ್ತಿತ್ತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಯುವತಿಯರು ನೃತ್ಯ ಮಾಡಿ ಸಂತಸ ಪಟ್ಟರು.

ಬಂಜಾರ ಸಮಾಜದ ತಾಲೂಕ ಅಧ್ಯಕ್ಷ ರವಿ ರಾಠೋಡ್ ಮಾತನಾಡಿ ಬಲಿ ಪಾಡ್ಯಮಿಯಂದು ಲಂಬಾಣಿ ಯುವತಿಯರು ಮತ್ತು ಸಣ್ಣ ಹುಡುಗಿಯರು ತಮ್ಮ ಸಂಪ್ರದಾಯಕ ರಂಗುರಂಗಿನ ಉಡುಪು ಧರಿಸಿ ಅಲಂಕಾರ ಮಾಡಿಕೊಂಡು ಬಿದುರಿನ ಭಕ್ತಿ ಹಿಡಿದುಕೊಂಡು ವಲ್ಲಣದ ಹೂವು ತರಲು ಕಾಡಿಗೆ ಹೋಗಿ ಅಲ್ಲಿಂದ ಬುಟ್ಟಿ ತುಂಬಾ ಹೂವನ್ನು ತರುವಾಗ ದಾರಿಯುದ್ದಕ್ಕೂ ಹಾಡು ಹೇಳುತ್ತಾ ನರ್ತಿಸುತ್ತಾ ತಾಂಡಾಗೆ ತಲುಪಿದ ಮೇಲೆ ಸಗಣಿಯ ಮೇಲೆ ಹೂವು ಹಾಕಿ ಅಲಂಕರಿಸಿ ಪ್ರತಿ ಮನೆಯ ಮುಂದೆ ವೃತ್ತಾಕಾರದಲ್ಲಿ ಸುತ್ತುವರೆದು ದೀಪ ಬೆಳಗಿ ಬಾಳು ಬೆಳಕಾಗಲಿ ಎಂದು ಕುಣಿದು ಹಾಡಿನ ರೂಪದಲ್ಲಿ ಪ್ರಾರ್ಥಿಸುತ್ತಿದ್ದರು ಆದರೆ ಇಂದು ನಗರ ಪಟ್ಟಣದಲ್ಲಿ ಈ ಪದ್ಧತಿ ಕಡಿಮೆಯಾಗಿದೆ. ಗ್ರಾಮೀಣ ಹಳ್ಳಿ ಭಾಗದ ಲಂಬಾಣಿ ತಾಂಡದ ಈ ಸಂಪ್ರದಾಯ ಪದ್ಧತಿ ಇನ್ನೂ ಇದೆ ಎಂದರು.

ಈ ಸಂದರ್ಭದಲ್ಲಿ ಗೋಪಾಲ್ ರಾಠೋಡ್, ಮಹಾದೇವ ರಾಠೋಡ್,ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಸುನಿತಾ ರಾಠೋಡ್, ಅಶ್ವಥ್ ರಾಥೋಡ್, ತಿರುಪತಿ ಚವ್ಹಾಣ, ಶಿವರಾಮ್, ಜಗದೀಶ್, ಅನಿಲ್, ಸೇರಿದಂತೆ ಇತರರಿದ್ದರು.


ನಮ್ಮ ಲಂಬಾಣಿ ಜನಾಂಗದವರ ವಿಶೇಷವಾದ ಹಬ್ಬವೆಂದರೆ ದೀಪಾವಳಿ ಹಬ್ಬ ಈ ಹಬ್ಬದಲ್ಲಿ ನಮ್ಮ ಸಂಪ್ರದಾಯದ ಆಚರಣೆಗಳು ನಡೆಯುತ್ತವೆ ಎಂದರು.

ಜಗದೀಶ್ ಚವ್ಹಾಣ

ಯುವ ಘಟಕ ಅಧ್ಯಕ್ಷರು

ಅಖಿಲ ಭಾರತ ಬಂಜಾರ ಸೇವಾ ಸಂಘ ಚಿತ್ತಾಪುರ.