ಲಂಡನ್ ವಿಳಾಸ ನಂಬದ ಮಾಹಿತಿ ಬಿಚ್ಚಿಟ್ಟ ಸುಧಾ

ನವದೆಹಲಿ, ಮೇ.೧೬- ನೀವು ತಮಾಷೆ ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸುವ ಮೂಲಕ ವಲಸೆ ಅಧಿಕಾರಿ ತನ್ನ ಲಂಡನ್ ವಿಳಾಸವನ್ನು ನಂಬಲು ನಿರಾಕರಿಸಿದ ಘಟನೆ ಬಗ್ಗೆ ಸುಧಾ ಮೂರ್ತಿ ಕಾರ್ಯಕ್ರಮವೊಂದರಲ್ಲಿ ವಿವರಿಸಿದರು.
ಒಮ್ಮೆ ನಾನು ಹೋದಾಗ, ಅವರು ನನ್ನ ನಿವಾಸದ ವಿಳಾಸವನ್ನು ಕೇಳಿದರು. ’ನೀವು ಲಂಡನ್‌ನಲ್ಲಿ ಎಲ್ಲಿ ವಾಸಿಸುತ್ತಿದ್ದೀರಿ’ ನನ್ನ ಅಕ್ಕ ನನ್ನ ಜೊತೆಗಿದ್ದಳು ಮತ್ತು ನಾನು ’೧೦ ಡೌನಿಂಗ್ ಸ್ಟ್ರೀಟ್ ಎಂದು ಬರೆಯಬೇಕೆ ಎಂದು ಯೋಚಿಸಿದೆ. ನನ್ನ ಮಗ ಅಲ್ಲಿ (ಯುಕೆ) ವಾಸಿಸುತ್ತಾನೆ, ಆದರೆ ನನಗೆ ಅವನ ಸಂಪೂರ್ಣ ವಿಳಾಸ ನೆನಪಿರಲಿಲ್ಲ. ಆದರೆ ನಾನು ಅಂತಿಮವಾಗಿ ೧೦ ಡೌನಿಂಗ್ ಸ್ಟ್ರೀಟ್ ಅನ್ನು ಬರೆದೆ, ”ಎಂದು ಮೂರ್ತಿ ಜನಪ್ರಿಯ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು.
ಏಕೆಂದರೆ ಇದು ಬ್ರಿಟಿಷ್ ಪ್ರಧಾನಿಯ ಅಧಿಕೃತ ನಿವಾಸ.
ವಲಸೆ ಅಧಿಕಾರಿ ತನ್ನನ್ನು ಸಂಪೂರ್ಣ ಅಪನಂಬಿಕೆಯಿಂದ ನೋಡಿದರು ಮತ್ತು “ನೀವು ತಮಾಷೆ ಮಾಡುತ್ತಿದ್ದೀರಾ ಎಂದು ಕೇಳಿದರು ಎಂದು ಅವರು ಬಹಿರಂಗಪಡಿಸಿದರು. “ನಹಿ, ಸಚ್ಚಿ ಬೋಲ್ಟಿ ಹೂ” (ಇಲ್ಲ, ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ) ಎಂದು ಉತ್ತರಿಸಿದೆ ಎಂದರು.
ಸುಧಾಮೂರ್ತಿ ಅವರು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಯುನೈಟೆಡ್ ಕಿಂಗ್ಡಮ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಅವರ ಅತ್ತೆಯಾಗಿದ್ದಾರೆ. ಮಗಳು ಅಕ್ಷತಾ ಮೂರ್ತಿಯನ್ನು ಸುನಕ್ ಮದುವೆಯಾಗಿದ್ದಾರೆ.
ಸುಧಾಮೂರ್ತಿಯವರು ಸರಳವಾಗಿ ಕಾಣಿಸಿಕೊಳ್ಳುವ ಮತ್ತು ಅವರ ಸ್ಥಾನಮಾನದ ಬಗ್ಗೆ ಯಾವುದೇ ಅಹಂಕಾರ ,ಗರ್ವ ಇಲ್ಲದಿರುವುದು ಅವರಿಗೆ ತೊಂದರೆಯಾಗಿದೆ.
೭೨ ವರ್ಷದ, ಸರಳ ಮಹಿಳೆಯಾಗಿರುವ ನಾನು ಪ್ರಧಾನಿಯ ಅತ್ತೆಯಾಗಬಲ್ಲೆ ಎಂದು ಯಾರೂ ನಂಬುವುದಿಲ್ಲ ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿದರು.
ದಿ ಕಪಿಲ್ ಶರ್ಮಾ ಶೋ ನ ಇತ್ತೀಚಿನ ಸಂಚಿಕೆಯಲ್ಲಿ,ಈ ಘಟನೆಯನ್ನು ಮೆಲುಕು ಹಾಕಿದ್ದಾರೆ.