ಲಂಡನ್ ನಲ್ಲಿ ಪ್ರಿಯಾಂಕಾ ಚೋಪ್ರಾ ತಾಯಿಯ ಜೊತೆ ಸೆಲೂನ್ ಗೆ ತೆರಳಿ ಲಾಕ್ಡೌನ್ ಮುರಿದ ಆರೋಪ: ಪೊಲೀಸರಿಂದ ಎಚ್ಚರಿಕೆ!

ಪ್ರಿಯಾಂಕಾ ಚೋಪ್ರಾ ಬುಧವಾರ ಸಂಜೆ ಲಂಡನ್ನಿ ನಲ್ಲಿ ಒಂದು ಸೆಲೂನ್ ಅಂಗಡಿಗೆ ತಲುಪಿ ಫಜೀತಿ ಅನುಭವಿಸಿದರು. ಅವರ ಜೊತೆಗೆ ಆವಾಗ ತಾಯಿ ಮಧು ಚೋಪ್ರಾ ಮತ್ತು ನಾಯಿ ಡಾಯ್ನಾ ಕೂಡ ಇತ್ತು. ಪ್ರಿಯಾಂಕಾರ ಈ ಕೆಲಸದಿಂದ ಯು.ಕೆಯಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ನ ಉಲ್ಲಂಘನೆಯಾಗಿದೆ.

ಯು.ಕೆಯಲ್ಲಿ ಕೊರೋನಾವೈರಸ್ ಹೆಚ್ಚುತ್ತಿರುವ ಪ್ರಕರಣದಿಂದ ಅಲ್ಲಿ ಫೆಬ್ರವರಿ ತನಕ ಲಾಕ್ಡೌನ್ ವಿಧಿಸಲಾಗಿದೆ. ಇಂಥ ಸ್ಥಿತಿಯಲ್ಲಿ ಪ್ರಿಯಾಂಕಾ ಸೆಲೂನ್ ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದರು.
ಯು.ಕೆಯ ನ್ಯೂಸ್ ಪೋರ್ಟಲ್ ಮೆಟ್ರೋದ ವರದಿಯಂತೆ ಪ್ರಿಯಾಂಕಾ ಸುಮಾರು ೪.೫೫ ಕ್ಕೆ ಸೆಲೂನಿಗೆ ಬಂದಿದ್ದರು. ಲಾಕ್ ಡೌನ್ ಪ್ರಯುಕ್ತ ಪರ್ಸನಲ್ ಕೇರ್ ಸರ್ವಿಸಸ್ ಬಂದ್ ಇದೆ. ಇದರಲ್ಲಿ ಸೆಲೂನ್ ಮತ್ತು ಸ್ಪಾ ಕೂಡಾ ಸೇರಿದೆ.


ಲ್ಯಾನ್ಸ್ ಡೌನ್ ಮ್ಯೂಸ್ ನಾಟಿಂಗ್ ಹಿಲ್ ನಲ್ಲಿ ಹೇರ್ ಡ್ರೆಸ್ಸರ್ ನ ನಿಯಮ ಉಲ್ಲಂಘಿಸಿದ ಘಟನೆ ಪೊಲೀಸರ ತನಕ ತಲುಪಿತ್ತು .ಸುಮಾರು ೫:೪೦ ಸುಮಾರಿಗೆ ಪೊಲೀಸರು ಬಂದರು .ಆದರೆ ಪ್ರಿಯಾಂಕ ಚೋಪ್ರಾ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವುದರಿಂದ ಕೇವಲ ಎಚ್ಚರಿಕೆ ನೀಡಿ ಪೊಲೀಸರು ಹೊರಟುಹೋದರು. ಅಲ್ಲಿ ದಂಡ ವಿಧಿಸಬಹುದಾಗಿತ್ರು.ಆದರೆ ಸೆಲೆಬ್ರಿಟಿ ಸ್ಟೈಲಿಸ್ಟ್ ಜೋಸ್ ವುಡ್ ಇದ್ದುದರಿಂದಲೂ ಸುಮ್ಮನಾದರು.

ಪ್ರಿಯಾಂಕಾ ಲಂಡನ್ ನಲ್ಲಿ ತನ್ನ ಪತಿ ನಿಕ್ ಜೋನಸ್ ಜೊತೆಗೆ ಇದ್ದು ಈಗ ಲಾಕ್ ಡೌನ್ ಕಾರಣ ಸಿಕ್ಕಿಬಿದ್ದಿದ್ದಾರೆ .ಅವರ ಆಪ್ ಕಮಿಂಗ್ ಫಿಲ್ಮ್ ಟೆಕ್ಸ್ಟ್ ಫಾರ್ ಯು ಶೂಟಿಂಗ್ ಗಾಗಿ ಬಂದಿದ್ದರು .ಈ ತಿಂಗಳಲ್ಲಿ ಶೂಟಿಂಗ್ ಮುಗಿಸ ಬೇಕಿದ್ದರೂ ಕೊರೊನಾ ಲಾಕ್ ಡೌನ್ ಕಾರಣ ಪ್ರೊಡಕ್ಷನ್ ಟೀಮ್ ನ ಎಲ್ಲರೂ ಶೀಘ್ರವೇ ಅಮೆರಿಕ ಕ್ಕೆ ಹಿಂತಿರುಗಲು ವ್ಯವಸ್ಥೆ ಆಗುತ್ತಿದೆ.

ಬಾಲಿವುಡ್ ಡ್ರಗ್ಸ್ ಕೇಸ್:ಸುಶಾಂತ್ ಸಿಂಗ್ ರಾಜಪುತ್ ರ ಸ್ನೇಹಿತ ಮತ್ತು ಅಸಿಸ್ಟೆಂಟ್ ಡೈರೆಕ್ಟರ್ ಋಷಿಕೇಶ್ ಪವಾರ್ ಹುಡುಕಾಟದಲ್ಲಿ ಎನ್. ಸಿ .ಬಿ

ಬಾಲಿವುಡ್ ಡ್ರಗ್ಸ್ ಕೇಸಿನಲ್ಲಿ ಇದೀಗ ಸುಶಾಂತ್ ಸಿಂಗ್ ರಾಜಪುತ್ ರ ಇನ್ನೋರ್ವ ಸ್ನೇಹಿತ ಋಷಿಕೇಶ್ ಪವಾರ್ ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಹುಡುಕುತ್ತಿದೆ.


ಅವರು ತಮ್ಮ ಮನೆಯಿಂದ ನಾಪತ್ತೆಯಾಗಿದ್ದಾರೆ .ಅನೇಕ ಬಾರಿ ಸಮನ್ ನೀಡಿದ ಹೊರತೂ ಅವರು ತನಿಖಾ ಏಜೆನ್ಸಿಯ ಮುಂದೆ ಹಾಜರಾಗಿರಲಿಲ್ಲ.
ಓರ್ವ ಡ್ರಗ್ಸ್ ಸಪ್ಲಾಯರ್ ನು ಸುಶಾಂತ್ ಸಿಂಗ್ ರಾಜಪುತ್ ಅವರ ಮಾಜಿ ಗೆಳೆಯ ಅಸಿಸ್ಟೆಂಟ್ ಡೈರೆಕ್ಟರ್ ಋಷಿಕೇಶ್ ಪವಾರ್ ನ ಹೆಸರನ್ನು ಹೇಳಿದ್ದ. ಆನಂತರ ಒಂದು ಬಾರಿ ಅವರ ವಿಚಾರಣೆಯೂ ನಡೆದಿತ್ತು. ಆದರೆ ಇತ್ತೀಚೆಗೆ ಅವರು ನಾಪತ್ತೆಯಾಗಿದ್ದಾರೆ. ಸುಶಾಂತರ ಹೌಸ್ ಮ್ಯಾನೇಜರ್ ಆಗಿದ್ದ ದೀಪೇಶ್ ಸಾವಂತ್ ಕೂಡ ಋಷಿಕೇಶ್ ಅವರೇ ಸುಶಾಂತ್ ಗೆ ಡ್ರಗ್ಸ್ ತರುತ್ತಿದ್ದರು ಎಂಬ ಮಾತನ್ನು ಹೇಳಿದ್ದರು.


ತನ್ನ ಬಂಧನದಿಂದ ಪಾರಾಗಲು ಋಷಿಕೇಶ್ ಪವಾರ್ ಎನ್ ಡಿ ಪಿ ಎಸ್ ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದು ನಿನ್ನೆ ತಿರಸ್ಕರಿಸಲ್ಪಟ್ಟಿದೆ. ಅನಂತರ ಅವರ ಹುಡುಕಾಟ ಆರಂಭವಾಗಿದೆ. ಪವಾರ್ ಕೆಲಸಮಯದ ತನಕ ಸುಶಾಂತ್ ಸಿಂಗ್ ಜೊತೆಗೆ ಕೆಲಸ ಮಾಡಿದ್ದರು. ಆದರೆ ಕಳೆದ ವರ್ಷ ಅವರನ್ನು ತೆಗೆದುಹಾಕಲಾಗಿತ್ತು .


ಸುಶಾಂತ್ ಸಿಂಗ್ ರಾಜಪುತ್ ರ ೧೪ ಜೂನ್ ೨೦೨೦ಕ್ಕೆ ತಮ್ಮ ಬಾಡಿಗೆ ಪ್ಲಾಟ್ ನಲ್ಲಿ ನಿಧನರಾದ ನಂತರ ಸಿಬಿಐ, ಇಡಿ, ಎನ್ ಸಿ ಬಿ, ಮುಂಬೈ ಪೊಲೀಸ್, ಬಿಹಾರ್ ಪೊಲೀಸ್… ಹೀಗೆ ಹಲವು ಏಜನ್ಸಿ ಗಳು ತನಿಖೆಗಳನ್ನು ನಡೆಸಿವೆ. ಆದರೆ ಇನ್ನೂ ಅಂತಿಮ ತೀರ್ಮಾನ ಬಾರದೆ ಡ್ರಗ್ಸ್ ತನಿಖೆಯಲ್ಲೇ ಮುಂದುವರೆಯುತ್ತಿದೆ.