ಲಂಡನ್ ಗಿಂತಲೂ ಭಾರತ ಆರ್ಥಿಕವಾಗಿ ಸದೃಡ ಭ್ರಷ್ಟಾಚಾರ ರಹಿತ ಮೋದಿಯವರ ಆಡಳಿತವೇ ಕಾರಣ: ಅಸ್ಸಾಂ ಸಿಎಂ ಶರ್ಮ


ಬಳ್ಳಾರಿ: ನಮ್ಮನ್ಮಾಳಿದ ಬ್ರಿಟನ್ ದೇಶಕ್ಕಿಂತಲೂ ಭಾರತ ಆರ್ಥಿಕವಾಗಿ ಸದೃಡವಾಗಿದೆ ಕಾರಣ ಮೋದಿ ನೇತೃತ್ವದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಎಂದು ಅಸ್ಸಾಂ ಮುಖ್ಯ ಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮ ಹೇಳಿದರು

ಅವರು ಇಂದು ಸಂಜೆ ಸಿರುಗುಪ್ಪ ಪಟ್ಟಣದ ನಿಟ್ಟೂರು ನರಸಿಂಹ ಮೂರ್ತಿಯವರ ಮೈದಾನದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಅಸ್ಸಾಂನಲ್ಲಿ ರಸ್ತೆ, ರೈಲ್ವೆಯ ಅಭಿವೃದ್ಧಿ ಪಡಿಸಿದ್ದರಿಂದ ನೆರೆಯ ಶತ್ರುಗಳನ್ನು, ಭಯೋತ್ಪಾದಕರನ್ನು ಎದುರಿಸಲು ಸಹಕಾರಿಯಾಗಿದೆ. ಪಿಓಕೆಯನ್ನು ಮತ್ತೆ ಭಾರತಕ್ಕೆ ಪಡೆಯುವುದು ಕೇಂದ್ರದ ಬಿಜೆಪಿ ಸರ್ಕಾರದ ಉದ್ದೇಶ ಆಗಿದೆ. ಭಾರತವನ್ನು ವಿಶ್ವಗುರು ಮಾಡಬೇಕಿದೆಂದರು.

ಕರ್ನಾಟಕ ರಾಜ್ಯದ ಬಜೆಟ್ ಮೂರು‌ಲಕ್ಷ ಕೋಟಿ ಬಜೆಟ್ ಮಂಡಿಸಿದೆ ಇದು ವಿಕಾಸ್ ವಾದವನ್ನು ಪ್ರದರ್ಶಿಸುತ್ತದೆ‌. ರಾಜ್ಯದ ಜಿಡಿಪಿ ಉತ್ತಮವಾಗಿದ್ದು
ದೇಶದಲ್ಲಿಯೇ ಕರ್ನಾಟಕ ಆದ್ಯತೆಯನ್ನು ಹೊಂದಿದೆ.

ಕರ್ನಾಟಕದ ಬಸವೇಶ್ವರ ಅವರ ಸಂದೇಶ ಇಡೀ ವಿಶ್ವಕ್ಕೆ ಸಂಬಂಧಿಸಿದ್ದಾಗಿದೆ. ಮೋದಿ ಅವರು ಸಹ ಲಂಡನ್ ನಲ್ಲಿ ಬಸವೇಶ್ವರರ ಮಹತ್ವ ಹೇಳುತ್ತಾರೆ. ಆದರೆ ಕಾಂಗ್ರೆಸ್ ನ ರಾಹುಲ್ ಬಸವೇಶ್ವರನ್ನು ನಿರ್ಲಕ್ಷಿಸುತ್ತಾರೆಂದರು.‌

ಪಿಎಂ ಆಯುಷ್ ಯೋಜನೆ,
ಅಮೆರಿಕ, ಲಂಡನ್ ರೀತಿಯಲ್ಲಿ ಕರ್ನಾಟಕದಲ್ಲಿ ರಸ್ತೆಗಳನ್ನು ನಿರ್ಮಿಸಿದೆ. ಗುಜರಾತ್ ನಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಂತೆ ಕರ್ನಾಟಕದಲ್ಲೂ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು. ಕೇಂದ್ರದಲ್ಲಿ ಮತ್ತೆ ಮೋದಿಯವರನ್ನು ಅಯ್ಕೆ ಮಾಡಬೇಕಿದೆಂದರು.

ದೇಶದಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವ ಇಲ್ಲ. ಅದು ಸಮುದ್ರದ ಪಾಲಾಗಿದೆ. ಅರಣ್ಯ, ಡೈರಿ ಸೇರಿದಂತೆ ಹಲವು ಹಗರಣಗಳಲ್ಲಿ ಪಾಲ್ಗೊಂಡ ಕಾಂಗ್ರೆಸ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.

ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಜಾತ್ಯಾತೀತ ವಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಎಲ್ಲರ ಪ್ರೀತಿ ಸ್ನೇಹ ಹೊಂದಿದ್ದಾರೆಂದರು.

ರೈತ ಪರವಾದ ರಾಜ್ಯದಲ್ಲಿನ ಬಿಜೆಪಿ‌ ನೇತೃತ್ವದ ಸರ್ಕಾರ ತುಂಗಭದ್ರ ಜಲಾಶಯದಲ್ಲಿನ ಹೂಳಿನಿಂದ ವ್ಯರ್ಥವಾಗಿ ಹರಿಸು ಹೋಗುವ ನೀರಿನ ಸದ್ಮಳಕೆಗೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ಒಂದು ಸಾವಿರ ಕೋಟಿ ರೂ ಗಳನ್ನು ರಾಜ್ಯ ಸರ್ಕಾರ ನೀಡಿದೆಂದರು.
ರೈತರಿಗೆ ಐದು ಲಕ್ಷದ ವರಗೆ ಬಡ್ಡಿ ರಹಿತ ಸಾಲ‌ನೀಡುತ್ತಿದೆ. ಮಹಿಳೆಯರು ಉಚಿತ ಬಸ್ ಪಾಸ್ ನೀಡಲಿದೆ. ಶಾಲಾ ಮಕ್ಕಳಿಗೆ ವಿಶೇಷ ಬಸ್ ಸಂಚಾರದ ವ್ಯವಸ್ಥೆ ಮಾಡಲಿದೆ. ಭೂರಹಿತರಿಗೆ ಮಾಸಿಕ‌ ಒಂದು ಸಾವಿರ ರೂ ನೀಡಲಿದೆಂದರು.
ಹೊರಗಿನಿಂದ ಬಂದು ಇಲ್ಲಿ ನಿಲ್ಲುವ ಕಾಂಗ್ರೆಸ್ ಅಭ್ಯರ್ಥಿಗೆ ಪಾಠ ಕಲಿಸಿ ಎಂದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ಜಾತಿ ಪಟ್ಟಿಯಲ್ಲಿ ಇಲ್ಲದ ಲಾಳಗೊಂಡ ಸಮಾಜವನ್ನು ಬರುವ ಸಚುವ ಸಂಪುಟ ಸಭೆಯಲ್ಲಿ ಸೇರಿಸಲಿದೆಂದು ಹೇಳಿದರು.

ವಿಧಾನ‌ ಪರಿಷತ್ ಸದಸ್ಯ ವೈ.ಎಂ.ಸತೀಶ್ ಮಾತನಾಡಿ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ಎಲ್ಲಾ ರೈತರಿಗೆ ವಾರ್ಷಿಕ ಆರು ಸಾವಿರ ರೂ ನೇರವಾಗಿ ನಿಮ್ಮ ಖಾತೆಗೆ ಬರುತ್ತೆ. ಈ ಹಿಂದೆ ನಿಮಗೆ ಈ ರೀತಿಯ ಸಹಾಯ ಧನ ಸಿಗಬೇಕೆಂದರೆ ಅರ್ಧ ಸೋರಿ ಬರುತ್ತಿತ್ತು. ಅವರಿವರ ಬಳಿ ಅಲೆದಾಡಬೇಕಿತ್ತು. ಅ ಸಂದರ್ಭ ಈಗ ಇಲ್ಲ.
ಕೋವಿಡ್ ನಂತಹ ಮಾರಕ ರೋಗಕ್ಕೆ ಲಸಿಕೆ ಕಂಡು ಹಿಡಿದು ಎಲ್ಲರಿಗೂ ಉಚಿತವಾಗಿ ನೀಡಿದೆ.

ಮೊದಲ ಹಂತದಲ್ಲಿನ ಜಲ ಜೀವನ‌ ಮಿಷನ್ ಯೋಜನೆಯಲ್ಲಿ ಅನೇಕ ಲೋಪಗಳಿವೆ ಅದನ್ನು ಸರಿಪಡಿಸಲಿದೆ. 2024 ರೊಳಗೆ ಶೇ 90 ರಷ್ಟು ಹಳ್ಳಿಗಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸಲಿದೆಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ
ಮುರಹರಗೌಡ, ರಾಜ್ಯ ಜವಳಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಪಕ್ಷದ ಮುಖಂಡರುಗಳಾದ ಮಾಲಿಕಯ್ಯ ಗುತ್ತೇದಾರ್, ಕೆ.ಎ.ರಾಮಲಿಂಗಪ್ಪ, ಡಾ.ಎಸ್.ಜೆ.ವಿ.ಮಹಿಪಾಲ್, ಸಿದ್ದರಾಜು, ಅನಿಲ್ ನಾಯ್ಡು, ಕೆ.ಎಸ್.ಅಶೋಕ್ ಕುಮಾರ್, ಬಂಗಾರು ಹನುಂಮತ ಮೊದಲಾದವರು ವೇದಿಕೆಯಲ್ಲಿದ್ದರು.