ಲಂಡನ್‌ನಲ್ಲಿ ಪರೀಕ್ಷಾರ್ಥ ನೈಟ್‌ಕ್ಲಬ್ ಪಾರ್ಟಿ

ಲಂಡನ್, ಮೇ ೧- ಒಂದು ಕಡೆ ವಿಶ್ವಾದ್ಯಂತ ಕೊರೊನಾ ಸೋಂಕು ಕೇಕೆ ಹಾಕುತ್ತಿದ್ದರೆ ಅತ್ತ ಇಂಗ್ಲೆಂಡ್‌ನಲ್ಲಿ ಹತೋಟಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ಸೋಂಕು ನಿಧಾನವಾಗಿ ಪಾರ್ಟಿ ಸಂಸ್ಕೃತಿ ಆರಂಭವಾಗುತ್ತಿದ್ದು, ಇದರ ಹಿನ್ನೆಲೆಯಲ್ಲಿ ಲಿವರ್‌ಪೂಲ್‌ನಲ್ಲಿ ಪರೀಕ್ಷಾರ್ಥವಾಗಿ ನೈಟ್ ಪಾರ್ಟಿ ಆಯೋಜಿಸಲಾಗಿತ್ತು.


ಸುಮಾರು ೧೮-೨೦ ವಯಸ್ಸಿನ ೩೦೦೦ ಸಾವಿರಕ್ಕಿಂತ ಹೆಚ್ಚಿನ ಯುವ ಸಮುದಾಯ ಈ ಪಾರ್ಟಿಯಲ್ಲಿ ಭಾಗವಹಿಸಿದ್ದವು. ಮಾಸ್ಕ್ ಸೇರಿದಂತೆ ಯಾವುದೇ ರೀತಿಯ ಮುನ್ನೆಚ್ಚರಿಯ ಕ್ರಮಗಳನ್ನು ಇಲ್ಲಿ ತೆಗೆದುಕೊಂಡಿರಲಿಲ್ಲ. ಅಲ್ಲದೆ ಸಾಮಾಜಿಕ ಅಂತರ ನಿಯಮವನ್ನು ಕೂಡ ಗಾಳಿಗೆ ತೂರಲಾಗಿತ್ತು. ಆದರೆ ಎಲ್ಲರೂ ೨೪ ಗಂಟೆಗಳ ಒಳಗಿನ ಕೋವಿಡ್-೧೯ ಪರೀಕ್ಷೆಯ ವರದಿಯನ್ನು ನೀಡಬೇಕಿತ್ತು. ಎರಡು ದಿನಗಳ ಈ ನೈಟ್ ಪಾರ್ಟಿಯಲ್ಲಿ ಮುಂದೆ ಯಾವ ರೀತಿಯ ಇಂಥ ಚಟುವಟಿಕೆಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗುತ್ತಿದೆ. ಅಲ್ಲದೆ ಆದಿತ್ಯವಾರ ಲಂಡನ್ ವೆಂಬ್ಲೆ ಫುಟ್ಬಾಲ್ ಮೈದಾನದಲ್ಲಿ ನಡೆಯುವ ಫೈನಲ್‌ನಲ್ಲಿ ಕೂಡ ೮ ಸಾವಿರ ಕ್ರೀಡಾ ಪ್ರೇಮಿಗಳಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ಯಾವುದೇ ಸಾಮಾಜಿಕ ಅಂತರದ ಪಾಲನೆ ಮಾಡದೇ ಇರುವುದು ಎಷ್ಟರ ಮಟ್ಟಿಗೆ ಸೋಂಕು ಹರಡಲು ಕಾರಣವಾಗುತ್ತದೆ ಎಂಬುದನ್ನು ಇಲ್ಲಿನ ತಜ್ಞರು ನಿಗಾ ವಹಿಸಲಿದ್ದು, ಇದರ ಭಾಗವಾಗಿಯೇ ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂಗ್ಲೆಂಡ್‌ನಲ್ಲಿ ಪಬ್, ರೆಸ್ಟೋರೆಂಟ್ ಸೇರಿದಂತೆ ಇತರೆ ಚಟುವಟಿಕೆಗಳನ್ನು ಎಪ್ರಿಲ್ ೧೨ರಿಂದಲೇ ಆರಂಭಿಸಲಾಗಿದ್ದು, ಮೇ ೧೭ರಿಂದ ಬಹುತೇಕ ಎಲ್ಲಾ ರೀತಿಯ ಚಟುವಟಿಕೆಗಳು ಸಾರ್ವಜನಿನರಿಗೆ ತೆರೆದು ಕೊಳ್ಳಲಿದೆ. ಒಟ್ಟಿನಲ್ಲಿ ಸಹಜ ಸ್ಥಿತಿಗೆ ಇಂಗ್ಲೆಂಡ್ ಮರಳುತ್ತಿದೆ ಎಂದರೆ ತಪ್ಪಾಗಲಾರದು.