ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್ ಲೋಕಾಯುಕ್ತ ಬಲೆಗೆ

ವಿಜಯಪುರ,ಮೇ.18:ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್, ಖಾಸಗಿ ವ್ಯಕ್ತಿ
ಲೋಕಾಯುಕ್ತ ಪೆÇಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಸರ್ವೆಯರ್ ಮಲ್ಲಪ್ಪ ಜಂಬಗಿ, ಖಾಸಗಿ ಸಹಾಯಕ ಗುರುದತ್ತ ಬಿರಾದಾರ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ನಾಲ್ಕು ಎಕರೆ ಜಮೀನಿನ ತತ್ಕಾಲ್ ಪೆÇೀಡಿ ಮಾಡಲು ಪ್ರಕಾಶ್ ಸಿಂಗೆ ಎಂಬುವರ ಬಳಿ ಸರ್ವೇಯರ್ 47,000 ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಲಂಚದ ಹಣ ಸ್ವೀಕರಿಸುವ ವೇಳೆ ದಾಳಿ ಮಾಡಿದ ಲೋಕಾಯುಕ್ತ ಪೆÇಲೀಸರು
47,000 ನಗದು ಹಣ ವಶಪಡಿಸಿಕೊಂಡು ಸರ್ವೇಯರ್ ಮಲ್ಲಪ್ಪ ಹಾಗೂ ಸಹಾಯಕ ಗುರುದತ್ತನನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಮಲ್ಲೇಶ, ಡಿಎಸ್ಪಿ ಸುರೇಶ್ ರೆಡ್ಡಿ, ಸಿಪಿಐ ಆನಂದ ಟಕ್ಕನವರ್, ಆನಂದ ದೋಣಿ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.