ಲಂಚ ಪಡೆಯುತ್ತಿದ್ದ ಮುಖ್ಯ ಶಿಕ್ಷಕ ಲೋಕಾಯುಕ್ತ ಬಲೆಗೆ

ಬೀದರ್:ಫೆ.16: ನಿವೃತ್ತ ವೇತನ ಸೇರಿ ಇನ್ನಿತರ ಪ್ರಕ್ರಿಯೆ ಪೂರ್ಣಗೊಳಿಸಲು ಲಂಚ ಪಡೆಯುತ್ತಿದ್ದ ನಗರದ ಶಹಾಪುರ ಗೇಟ್ ಬಳಿಯ ಸ್ವಾಮಿ ವಿವೇಕಾನಂದ ಶಾಲೆ ಮುಖ್ಯ ಶಿಕ್ಷಕ ತುಕರಾಮ ಕಾಂಬ್ಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶಶಿಕಲಾ ಧನ್ನೂರಕರ್ ಇತ್ತೀಚೆಗೆ ನಿವೃತ್ತರಾಗಿದ್ದರು.

ಅವರ ನಿವೃತ್ತ ವೇತನ ಇನ್ನಿತರ ಪ್ರಕ್ರಿಯೆ ಪೂರ್ಣಗೊಳಿಸಲು ಮೂರು ಲಕ್ಷ ರೂ.ಗೆ ಮುಖ್ಯ ಶಿಕ್ಷಕ ಬೇಡಿಕೆ ಇಟ್ಟಿದ್ದ. 50 ಸಾವಿರ ನಗದು ಹಾಗೂ 1 ಲಕ್ಷ ರೂ. ಚೆಕ್ ಸ್ವೀಕರಿಸುತ್ತಿದ್ದ ವೇಳೆ ಶಾಲೆಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಡಿವೈಎಸ್ಪಿ ನೀಲಪ್ಪ ಓಲೇಕಾರ ನೇತೃತ್ವದಲ್ಲಿ ದಾಳಿ ನಡೆದಿದೆ.