ಲಂಚ ಪಡೆದ ಪೊಲೀಸ್ ಪೇದೆ ಅಮಾನತ್ತು

ಅಕ್ರಮ ಮರಳು ಸಾಗಾಣಿಕೆ ಚಾಲಕ ಸಾವು
ಸಿಂಧನೂರು.ಜು.೮-ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ ಟ್ರ್ಯಾಕ್ಟರ್ ಚಾಲಕ ಮರಣ ಹೊಂದಿದ್ದು ಅಕ್ರಮ ಮರಳು ಸಾಗಾಣಿಕೆದಾರರಿಂದ ಲಂಚ ಪಡೆದ ಆರೋಪದ ಮೇರಿಗೆ ಪೇದೆಯೊಬ್ಬರು ಅಮಾನತ್ತಾದ ಘಟನೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಕಲ್ಲೂರು ಗ್ರಾಮದ ಸುರೇಶ್ ತಂದೆ ಲಿಂಗಪ್ಪ ಮರಣ ಹೊಂದಿದ ಟ್ರ್ಯಾಕ್ಟರ್ ಚಾಲಕನಾಗಿದ್ದಾನೆ. ಕಲ್ಲೂರು ಗ್ರಾಮದ ಹಳ್ಳದಿಂದ ಟ್ರ್ಯಾಕ್ಟರ್‌ನಲ್ಲಿ ಅಕ್ರಮ ಮರಳು ತುಂಬಿ ಕೊಂಡು ಬರುವಾಗ ಯಾವದೊ ಕಾರ್ ಬಂದಿದ್ದನ್ನು ನೋಡಿ ಪೊಲೀಸರ ಕಾರ್ ಎಂದು ತಿಳಿದು ಟ್ರ್ಯಾಕ್ಟರ್ ಚಾಲಕ ವೇಗವಾಗಿ ಟ್ರ್ಯಾಕ್ಟರ್ ತಗೆದುಕೊಂಡು ಹೋಗುವಾಗ ಕೆಳಗೆ ಬಿದ್ದು ಮರಣಯೊಂದಿದ್ದಾನೆ. ಟ್ರ್ಯಾಕ್ಟರ್ ಮಾಲೀಕ ಮುದಿಯಪ್ಪ ಅಲಿಯಾಸ್, ಸಣ್ಣನಾಗಪ್ಪ ಪರಾರಿಯಾಗಿದ್ದು ಮೃತ ಟ್ರಾಕ್ಟರ್ ಚಾಲಕನ ಪತ್ನಿ ಹಂಪಮ್ಮ ದೂರಿನ ಮೇರಿಗೆ ಗ್ರಾಮೀಣ ಠಾಣೆಯಲ್ಲೆ ಪ್ರಕರಣ ದಾಖಲಾಗಿದೆ.
ತಾಲೂಕಿನ ಅಲಬನೂರು ಹಳ್ಳದಿಂದ ಟ್ರ್ಯಾಕ್ಟರ್ ಮೂಲಕ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದು ಅಂದು ಕರ್ತವ್ಯದಲ್ಲಿ ಇದ್ದ ಪೊಲೀಸ್ ಪೇದೆಗೆ ಲಂಚ ನೀಡಿದ ಬಗ್ಗೆ ಮಾಹಿತಿ ಆದರಿಸಿ ಗ್ರಾಮೀಣ ಠಾಣೆ ಪಿ.ಎಸ್.ಐ ಎರಿಯಪ್ಪ ಅಕ್ರಮ ಮರಳು ಸಾಗಾಣಿಕೆದಾರರನ್ನು ಠಾಣೆಗೆ ಕರಿಸಿ ಪೇದೆ ಸಮ್ಮುಖದಲ್ಲಿ ವಿಚಾರಣೆ ನಡೆಸಿದ್ದಾಗ ಬೀಟ್ ಪೊಲೀಸ್ ನಿಜಲಿಂಗಪ್ಪನಿಗೆ ಲಂಚ ನೀಡಿದ ಬಗ್ಗೆ ಅಕ್ರಮ ಮರಳು ದಂದೆ ಕೋರರು ಒಪ್ಪಕೊಂಡ ಮೇಲೆ ಪಿ.ಎಸ್.ಐ ಎರಿಯಪ್ಪ ದೂರಿನ ಮೇರಿಗೆ ಪೇದೆ ನಿಜಲಿಂಗಪ್ಪನನ್ನು ಎಸ್.ಪಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.