ಲಂಚ ನೀಡದ ಕಾರಣ ಶಾಲೆಗೆ ಅನುಮತಿ‌ ನಿರಾಕರಣೆ
ಸಂಕಟ ತೋಡಿಕೊಂಡ ನಿವೃತ್ತ ಶಿಕ್ಷಕಿ: ಪದ್ಮಾವತಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಯಾವುದೇ ರೀತಿ ಡೋನೇಷನ್ ಇಲ್ಲದೆ ಆಂಗ್ಲ ಮಾಧ್ಯಮದಲ್ಲಿ ಗುಗ್ಗರಹಟ್ಟಿಯ ಸುತ್ತಮುತ್ತಲಿನ
ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ನಡೆಸುತ್ತಿರುವ ನಮ್ಮ ಶಾಲೆಗೆ ನಾವು ಲಂಚ ನೀಡಿತ್ತಿಲ್ಲ ಎಂದು ಶಿಕ್ಷಣ ಇಲಾಖೆಯಿಂದಲೇ ಮುಚ್ಚುವ ಕೆಲಸ ನಡೆದಿದೆ ಎಂದು ನಗರದ ಗುಗ್ಗರಹಟ್ಟಿಯ ಗುರುಕುಲ ಶಾಲೆಯ ಅಧ್ಯಕ್ಷೆ ಪದ್ಮಾವತಿ ಅವರು ಆರೋಪಿಸಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ಸರಗಕಾರದ ಒಂದುವರೆ ಎಕರಡ ನಿವೇಶನದಲ್ಲಿ ನಮ್ಮ ಶಾಲೆ ಎಲ್ ಕೆ.ಜಿಯಿಂದ 1989 ರಿಂದ ಆರಂಭಗೊಂಡಿದೆ. ಇದನ್ನು ಆರಂಭಿಸಿದೆ.
ನಾನು ಶಿಕ್ಷಕಿಯಾಗಿದ್ದೆ. ನನ್ನ ತಾಯಿ, ಅಜ್ಜಿ ಸಹ ಶಿಕ್ಷಕಿಯಾಗಿದ್ದರು. ಇದು ನನ್ನ ಆಶಯಕ್ಕೆ ಕಾರಣವಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಶಾಲೆ ನಡೆಸುತ್ತಿದೆ. ಇಲ್ಲಿ ಒಂದರಿಂದ ಹತ್ತನೆ ತರಗತಿ ನಡೆಸಲಾಗುತ್ತಿದೆ. ಆದರೆ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆಗೆ ಅನುಮತಿಯನ್ನು ರಿನವಲ್ ಮಾಡಲು ಕೋರಿದ್ದರೂ ನೀಡುತ್ತಿಲ್ಲ.

ಕಾರಣ ಬಿಇಓ ಕಚೇರಿಯ ಸೂಪರಿಂಟೆಂಡೆಂಟ್ ಕಿಶೋರ್ ಅವರು ಹಣ ಬಯಸುತ್ತಿದ್ದಾರೆ. ಶಾಲೆಗೆ ಸಂಬಂಧಿಸಿದ ಕಡತಗಳನ್ನು 2014 ಮತ್ತು 16 ರಲ್ಲಿ ನೀಡಿದೆ. ರಿನಿವಲ್ ಮಾಡದ ಕಾರಣ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ದೊರೆಯುವುದಿಲ್ಲ ಎಂದು. ನೇರವಾಗಿ 2018 ರಲ್ಲಿ ಡಿಡಿಪಿಐ ಕಚೇರಿ ಮುಂದೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದೆ. ನಂತರ ಕಿಶೋರ್ ಅವರನ್ನು ಕರೆದು ರಿನವಲ್ ಬಗ್ಗೆ ಮೇಲಾಧಿಕಾರಿ ಬಿಈಓ ವೆಂಕಟೇಶ್ ಅವರು ಕೇಳಿದರೆ. ಇವರ ಶಾಲೆಯ ಒರಿಜನಲ್ ಕಡತಗಳು ಕಳೆದಿವೆ ಎಂದು ಹೇಳುತ್ತಿದ್ದಾರೆ.

ನಂತರ ಸಂಬಂಧಿಸಿದ ಅಧಿಕಾರಿಗಳೆಲ್ಲ ಶಾಲೆಗೆ ಬಂದು ಅನುಮತಿ ನೀಡಲು ಅವಶ್ಯವಾದ ಎಲ್ಲಾ ಅಂಶಗಳು ಇವೆ ಎಂದು ಹೇಳಿ. ಇಲ್ಲಿ ಎಸ್ ಎಸ್ ಎಲ್ ಸಿಯಲ್ಲಿ 12 ವಿದ್ಯಾರ್ಥಿಗಳು ಮಾತ್ರ ಇದ್ದಾರೆ ಎಂದು ಒಂದು ವರ್ಷಕ್ಕೆ ಮಾತ್ರ ಅನುಮತಿ ಕೊಟ್ಟರು.
ನಂತರವೂ
ಶಾಲೆಗೆ ಎಲ್ಲಾ ರೀತಿಯ ಕಿರುಕುಳ ನೀಡುತ್ತಿದ್ದಾರೆ ಶಿಕ್ಷಣ ಇಲಾಖೆಯವರು. ಪಠ್ಯ ಪುಸ್ತಕ ನೀಡಲು ಸಹ ಲಂಚ ಕೇಳುತ್ತಾರೆ.

ಈ ಹಿಂದೆ ಡಿಸಿಯಾಗಿದ್ದ ಅಶೋಕ್ ಕುಮಾರ್ ಮನೋಳಿ ಅವರು ಶಾಲೆಗೆ ನಿವೇಶನ ಮಂಜೂರು ಮಾಡಲು ಮುಂದಾಗಿದ್ದರು. ಕೆಲ ಕಾರಣಗಳಿಂದ ನಮ್ಮ ಸಂಸ್ಥೆ ಹೆಸರಿಗೆ ನೋಂದಣಿ ಆಗಿಲ್ಲ.
2019 ರಲ್ಲಿ ಮತ್ತೆ ನಮ್ಮ ಸಂಸ್ಥೆಗೆ ನೀಡಲು ಮನವಿ ನೀಡಿದೆ.

ನಾನು ಯಾವುದಕ್ಕೂ ಲಂಚ ನೀಡದ ಕಾರಣ ನನ್ನ ಸಂಸ್ಥೆಗೆ ಅನುಮತಿ ನೀಡುತ್ತಿಲ್ಲ.
ಕಳೆದ ವರ್ಷ ಎಸ್ ಎಸ್ ಎಲ್ ಸಿಯಲ್ಲಿ 13 ಮಕ್ಕಳು ಇದ್ದರು. ಅವರನ್ನು ಬೇರೆ ಶಾಲೆ ಜೊತೆ ಸೇರಿಸಿ ಪರೀಕ್ಷೆ ಬರೆಸಲಾಯಿತು. ಸಧ್ಯ 200 ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾರೆ.

ಒಟ್ಟಾರೆ ನಮ್ಮ ಶಾಲೆಯನ್ನು ನಡೆಸಲು ಅನುಮತಿ ನೀಡಬೇಕು ಎಂದು ಅವರು ಕೋರಿದರು. ನನಗೆ ನ್ಯಾಯ ದೊರೆಯದಿದ್ದರೆ ನ್ಯಾಯಾಲಯದ ಮೊರೆ ಹೋಗಲಿದೆ ಎಂದರು.‌
ಈ ಶಾಲೆಯ ನಿವೇಶನವನ್ನು ಹಾಕಿಕೊಳ್ಳಲು ಹುನ್ನಾರ ನಡೆಸಿರುವ ವ್ಯಕ್ತಿಗಳು ಈ ರೀತಿ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.