ಲಂಚದ ಬೇಡಿಕೆ : ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ವಿಜಯಪುರ:ಡಿ.31: ಜಮೀನುಗಳ ಖಾತೆ ಬದಲಾವಣೆ ಮಾಡಿಕೊಡಲು 12 ಸಾವಿರ ರೂ. ಲಂಚದ ಹಣಕ್ಕಾಗಿ ಬೇಡಿಕೆಯನ್ನಿಟ್ಟ ತಾಳಿಕೋಟೆ ತಾಲೂಕಿನ ಕಾರಗನುರ ಗ್ರಾಮ ಲೆಕ್ಕಾಧಿಕಾರಿ ಜಟ್ಟೆಪ್ಪ ಕೆಂಚಪ್ಪ ಪಾಯಪ್ಪಗೋಳ ಮೇಲೆ ಲೋಕಾಯುಕ್ತ ಪೋಲಿಸ್‍ರು ಪ್ರಕರಣ ದಾಖಲಿಸಿದ್ದಾರೆ.

ದಿನಾಂಕ : 29-12-2022 ರಂದು ಗ್ರಾಮಲೆಕ್ಕಾಧಿಕಾರಿ ಜಟ್ಟೆಪ್ಪ ಕೆಂಚಪ್ಪ ಪಾಯಪ್ಪಗೋಳ ತನ್ನ ಸಹೋದ್ಯೋಗಿ ಅಸ್ಕಿ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ನಾಯ್ಕೋಡಿ ಮೂಲಕ ತಾಳಿಕೋಟೆ ಪಟ್ಟಣದ ಬಿಜಾಪುರ ಸರ್ಕಲ್‍ದ ನಟರಾಜ್ ಹೋಟೆಲ್ ಎದುರಿಗೆ ಜಮೀನಿನ ಖಾತೆ ಬದಲಾವಣೆಗೆ 12 ಸಾವಿರ ರೂ. ಲಂಚದ ಹಣ ಪಡೆದುಕೊಳ್ಳು ಹೇಳಿ ಪರಾರಿಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ. ಇನ್ನೋರ್ವ ಆಪಾದಿತ ಅಸ್ಕಿ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ನಾಯ್ಕೋಡಿಯನ್ನು ಪೋಲಿಸರು ಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರೆದಿದೆ.

ಪೋಲಿಸ್ ಉಪಾಧೀಕ್ಷಕ ಅರುಣ ನಾಯಕ ನೇತೃತ್ವದ ಕಾರ್ಯಾಚರಣೆಯಲ್ಲಿ ಪೋಲಿಸ್ ಇನ್ಸಪೆಕ್ಟರ್ ಆನಂದ ಡೋಣಿ, ಆನಂದ ಟಕ್ಕನ್ನವರ, ಸಿಬ್ಬಂದಿಗಳಾದ ಗುರುಪ್ರಸಾದ ಹಡಪದ, ಸಂತೋಷ ಅಮರಖೇಡ, ಮಹೇಶ ಪೂಜಾರಿ, ಈರಣ್ಣ ಕನ್ನೂರ, ಆನಂದ ಪಡಶೆಟ್ಟಿ, ಸಾಬು ಮುಂಜೆ, ಎಸ್.ಎಂ. ಬಳಗಾನುರ, ಮದನಸಿಂಗ್ ರಜಪೂತ, ಮಾಳಪ್ಪ ಸಲಗೊಂಡ, ಸಂತೊಷ ಚವ್ಹಾಣ, ವಸೀಮ ಅಕ್ಕಲಕೋಟ ಅವರು ಭಾಗವಹಿಸಿದ್ದರು ಎಂದು ಪೋಲಿಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.