ಲಂಗು ಲಗಾಮಿಲ್ಲದ ಬದುಕಿಗೆ ಆಧ್ಯಾತ್ಮ ಒಂದು ಆಸರೆ: ಸಂತೋಷಕುಮಾರ್

ಕಲಬುರಗಿ:ಆ.23: ಇಂದಿನ ಗಡಿಬಿಡಿಯ ಲಂಗು ಲಗಾಮಿಲ್ಲದ ಮನುಷ್ಯನ ಬದುಕಿಗೆ ಆಧ್ಯಾತ್ಮ ಒಂದು ಆಸರೆ ಎಂದು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಧಾನ ಅಧಿಕಾರಿ ಸಂತೋಷಕುಮಾರ್ ಅವರು ಹೇಳಿದರು.
ನಗರದ ಸೇಡಂ ರಸ್ತೆಯಲ್ಲಿರುವ ಬ್ರಹ್ಮಾಕುಮಾರಿಸ್ ಅಮೃತ ಸರೋವರದ ಸಭಾಂಗಣದಲ್ಲಿ ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯನ ವಯಸ್ಸು ಏನೇ ಆಗಿರಲಿ. ಒತ್ತಡ, ಮಾನಸಿಕ ಒತ್ತಡ ಇದ್ದದ್ದೇ. ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗಾಗಿ ಏರ್ಪಡಿಸಲಾದ ಕಾರ್ಯಕ್ರಮ ನಮ್ಮ ಜೀವನದಲ್ಲಿ ಒಂದು ಹೊಸತನ ಮೂಡಿಸುತ್ತದೆ. ಜನರು ನಮ್ಮ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ಈಹೊತ್ತು ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಕರ್ನಾಟಕವಷ್ಟೇ ಅಲ್ಲ, ಹೊರತು ದೇಶದ ಜೀವನಾಡಿ ಇದ್ದಂತೆ. ನಮ್ಮ ಸಂಸ್ಥೆ ನಮ್ಮಗಳ ಕರ್ತವ್ಯವನ್ನು ಇನ್ನು ಒಳ್ಳೆಯ ರೀತಿಯಲ್ಲಿ ನಿಭಾಯಿಸಲು ರಾಜಯೋಗ ಸಹಯೋಗ ನೀಡುತ್ತದೆ ಎಂದರು.
ಸಾರಿಗೆ ಸಂಸ್ಥೆಯ ಅಧಿಕಾರಿ ವಿರೇಶ್ ಅವರು ಶುಭ ಕೋರಿದರು. ಕಾರ್ಯಾಗಾರದಲ್ಲಿ ರಾಜಯೋಗಿನಿ ಬಿ.ಕೆ. ವಿಜಯಾ ಅವರು ಒತ್ತಡ ನಿರ್ವಹಣೆ, ಬಿಕೆ ಶಿವಲೀಲಾ ಅವರು ಅಸಹಜ ಪರಿಸ್ಥಿತಿಯಲ್ಲಿ ಮಾನಸಿಕ ಸಮತೋಲನೆ, ರಾಜಯೋಗಿ ಬಿಕೆ ಪ್ರೇಮ್ ಅವರು ಧ್ಯಾನ ಮತ್ತು ಸಾರಿಗೆ ಪಯಣ ಎಂಬ ವಿಷಯ ಕುರಿತು ವಿವರಿಸಿದರು. ಈಶಾನ್ಯ ವಲಯದ ಎಂಟು ಜಿಲ್ಲೆಗಳ ಅಧಿಕಾರಿಗಳು ಪಾಲ್ಗೊಂಡ ಕಾರ್ಯಕ್ರಮವನ್ನು ಬಿಕೆ ಸವಿತಾ ಅವರು ನಡೆಸಿಕೊಟ್ಟರು ಎಂದು ಬಿಕೆ ದಾನೇಶ್ವರಿ ಅವರು ತಿಳಿಸಿದ್ದಾರೆ.