“ಲಂಕೆ” ಯಶಸ್ವಿ

ಲೂಸ್ ಮಾದ ಯೋಗೇಶ್ ಅಭಿನಯದ “ಲಂಕೆ” ಚಿತ್ರ‌‌ ಗಣಪತಿ ಹಬ್ಬದ ಶುಭದಿನದಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತಸ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ‌ಆಯೋಜಿಸಿತ್ತು.‌ “ಲಂಕೆ” ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದು ಸಹಜವಾಗಿ ಚಿತ್ರ ತಂಡದ ಮುಖದಲ್ಲಿ ಮಂದಹಾಸ ಮನೆ ಮಾಡಿದೆ.

ಚಿತ್ರದ ಯಶಸ್ವಿನ‌ ಬಗ್ಗೆ ಹೇಳಿಕೊಳ್ಳಲು ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಅಲ್ಲಿ ತಂಡ ಮಾಹಿತಿ ಹಂಚಿಕೊಂಡಿತು. ನಿರ್ದೇಶಕ ,ರಾಮ ಪ್ರಸಾದ್,ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಎರಡನೇ ವಾರದಲ್ಲೂ ಹೆಚ್ಚು ಕಡಿಮೆ ಅಷ್ಟೇ ಚಿತ್ರಮಂದಿರಗಳಲ್ಲಿ ಚಿತ್ರ ಮುಂದುವರೆಯುತ್ತಿದೆ. ಹಣ ಗಳಿಕೆಯೂ ಉತ್ತಮವಾಗಿದೆ ಎಂದರು.

ನಾಯಕ ಯೋಗಿ,ಕೊರೊನಾ ಸಂದರ್ಭದಲ್ಲಿ ‌ ಚಿತ್ರಕ್ಕೆ ಅಭಿಮಾನಿಗಳು ತೋರುತ್ತಿರುವ ಪ್ರೀತಿಕಂಡು ಸಂತಸವಾಗಿದೆ. ನನ್ನೊಡನೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ ಎನ್ನುವ ವಿವರ ಅವರದು.

ಹಿರಿಯ ನಟ ಶರತ್ ಲೋಹಿತಾಶ್ವ, ಮೂರು ಪಾತ್ರಗಳ ಬಗ್ಗೆ ಮಾಹಿತಿ ನೀಡಿ ನಿಮಗೆ ಇಷ್ಟವಾದ ಪಾತ್ರ ಮಾಡಿ ಎಂದು ಹೇಳಿದ ಮೊದಲ ನಿರ್ದೇಶಕ ರಾಮ್ ಪ್ರಸಾದ್. ಉಳಿದ ಎರಡು ಪಾತ್ರಗಳನ್ನು ಹಲವು ಚಿತ್ರಗಳಲ್ಲಿ ಮಾಡಿದ್ದೆ. ಆದರೆ ಮಂಗಳಮುಖಿ ಪಾತ್ರ ಮಾಡಿದ್ದು ಇದೇ ಮೊದಲು. ಈ ಪಾತ್ರಕ್ಕೆ ಜನ ಮೆಚ್ಚುಗೆ ವ್ಯಕ್ತವಾಗುತ್ತಿರುವುದಕ್ಕೆ ಸಂತಸವಾಗಿದೆ ಎಂದರು. ಕಲಾವಿದರಾದ ಡ್ಯಾನಿ ಕುಟ್ಟಪ್ಪ. ಪ್ರಶಾಂತ್ ಸಿದ್ದಿ ಅನುಭವ ಹಂಚಿಕೊಂಡರು.