ಲಂಕಾ ವಿರುದ್ಧ ಬಾಂಗ್ಲಾಕ್ಕೆ ರೋಚಕ ಜಯ

ಡಲ್ಲಾಸ್.ಜೂ.೮- ಬಾಂಗ್ಲಾದೇಶ ಕ್ರಿಕೆಟ್ ತಂಡ ಬದ್ಧವೈರಿ ಶ್ರೀಲಂಕಾ ವಿರುದ್ಧ ೨ ವಿಕೆಟ್‌ಗಳ ರೋಚಕ ೨ ವಿಕೆಟ್‌ಗಳ ಗೆಲುವು ಪಡೆದು ಟಿ-೨೦ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದೆ.
ಸತತ ಎರಡು ಪಂದ್ಯಗಳನ್ನು ಸೋತಿರುವ ಶ್ರೀಲಂಕಾ ತಂಡದ ಹಾದಿ ಕಠಿಣವಾಗಿದೆ.
ಇಲ್ಲಿನ ಗ್ರ್ಯಾಂಡ್ ಪ್ರಯರಿ ಮೈದಾನದಲ್ಲಿ ನಡೆದ ಟಿ೨೦ ವಿಶ್ವಕಪ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ೨೦ ಓವರ್‌ಗಳಲ್ಲಿ ೯ ವಿಕೆಟ್ ನಷ್ಟಕ್ಕೆ
೧೨೪ ರನ್ ಕಲೆ ಹಾಕಿತು. ಬಾಂಗ್ಲಾದೇಶ ೧೯ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೨೫ ರನ್ ಪೇರಿಸಿ ಗೆಲುವಿನ ನಗೆಬೀರಿತು.
೧೨೫ ರನ್ ಗುರಿ ಬೆನ್ನತ್ತಿದ ಬಾಂಗ್ಲಾ ತಂಡ ಸೌಮ್ಯ ಸರ್ಕಾರ್ ( ೦), ತನ್ಜಿದ್ ಹಸನ್ (೩) ಅವರ ವಿಕೆಟ್ ಕಳೆದುಕೊಂಡು ಆರಂಭಿಕ
ಆಘಾತ ಅನುಭವಿಸಿತು. ನಜ್ಮುಲ್ ಶಾಂಟೊ (೭ರನ್) ಬೇಗನೆ ಪೆವಿಲಿಂiiನ್ ಸೇರಿದರು. ಲಿಟನ್ ದಾಸ್ (೩೬ರನ್) ಹಾಗೂ ತೌಹಿದ್ ಹೃದಯ್ (೪೦ರನ್) ನಾಲ್ಕನೆ
ವಿಕೆಟ್‌ಗೆ ೬೩ ರನ್‌ಗಳ ಜತೆಯಾಟ ನೀಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ನಿಲ್ಲಿಸಿದರು. ನಂತರ ದಾಳಿಗಿಳಿದ ಸ್ಪಿನ್ನರ್ ಹಸರಂಗ ಲಿಟನ್ ದಾಸ್ ಮತ್ತು ತೌಹಿದ್ ಹೃದಯ್‌ಗೆ
ಪೆವಿಲಿಯನ್ ದಾರಿ ತೋರಿಸಿದರು. ನಂತರ ಶಕೀಬ್ ಅಲ್ ಹಸನ್ (೮ರನ್), ರಿಷಾದ್ ಹೋಸೇನ್ ೧ ರನ್ ಗಳಿಸಿದರು. ಮೊಹ್ಮದ್‌ಹುಲ್ಲಾ
ಹಸರಂಗ ಅವರ ಓವರ್‌ನಲ್ಲಿ ೩ ಸಿಕ್ಸರ್ ಹೊಡೆದು ಕೊನೆಯವರೆಗೂ ಹೋರಾಡಿ ತಂಡಕ್ಕೆ ಇನ್ನು ಒಂದು ಓವರ್ ಬಾಕಿ ಇರುವಂತೆ ತಂಡಕ್ಕೆ ರೋಚಕ ಗೆಲುವು
ತಂದುಕೊಟ್ಟರು.
ಲಂಕಾ ಪರ ನುವಾನ್ ತುಷಾರ ೪ ವಿಕೆಟ್, ಹಸರಂಗ ೩೨ಕ್ಕೆ ೨, ವೇಗಿ ಪತಿರನ ೧ ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಸ್ಪಿನ್ನರ್ ರಿಶಾದ್ ಹೊಸೇನ್ ದಾಳಿಗೆ ತತ್ತರಿಸಿತು. ಲಂಕಾ ಪರ
ಪಾಥುಮ್ ನಿಸ್ಸಾಂಕಾ (೪೭), ಕುಶಾಲ್ ಮೆಂಡೀಸ್ ೧೦, ಧನಂಜಯ್ ಡಿಸಿಲ್ವಾ ೨೧, ಚರಿತ್ ಅಸಲಂಕಾ ೧೯, ಆಂಜಿಲೊ ಮ್ಯಾಥ್ಯೂಸ್ ೧೬ ರನ್ ಗಳಿಸಿದರು.
ಬಾಂಗ್ಲಾ ಪರ ಮುಸ್ತಾಫಿಜುರ್,ರಿಶಾದ್ ಹೊಸೇನ್ ತಲಾ ೩ ವಿಕೆಟ್, ತಸ್ಕಿನ್ ೨ ವಿಕೆಟ್ ಪಡೆದರು. ತಂಜೀಮ್ ೧ ವಿಕೆಟ್ ಪಡೆದರು.