
ಸಂಜೆವಾಣಿ ವಾರ್ತೆಹೊಸಪೇಟೆ ಆ17: ಇತ್ತಿಚೀನ ದಿನಗಳಲ್ಲಿ ಯುವಸಮೂಹವು ಮಾನವ ಹಕ್ಕುಗಳನ್ನು ನಿರಾಕರಿಸಿ ಱ್ಯಾಗಿಂಗ್ ಮೂಲಕ ಮಾನಸಿಕ, ದೈಹಿಕ ಹಾಗೂ ಲೈಗಿಂಕ ಕಿರುಕುಳ ನೀಡುತ್ತಿರುವುದು ಸಮಾಜದ ಬಹುದೊಡ್ಡ ಪಿಡುಗಾಗಿ ಪರಿಣಮಿಸುತ್ತಿದೆ. ಇದನ್ನು ಆರಂಭದಲ್ಲೇ ನಿಯಂತ್ರಿಸದಿದ್ದರೆ. ಭವಿಷ್ಯದಲ್ಲಿ ಮಾರಕವಾಗುವುದು ಎಂದು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿಯಾದ ಡಾ. ಎಚ್.ಎಲ್. ಜನಾರ್ದನ ಅವರು ಅಭಿಪ್ರಾಯಪಟ್ಟರು.ಕನ್ನಡ ವಿಶ್ವವಿದ್ಯಾಲಯದ ಭುವನವಿಜಯ ಸಭಾಂಗಣದಲ್ಲಿ ರ್ಯಾಗಿಂಗ್ ತಡೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರ್ಯಾಗಿಂಗ್ ತಡೆ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತ ರ್ಯಾಗಿಂಗ್ ಎನ್ನುವಂತದ್ದು ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚಾಗಿ ಕಂಡುಬರುವುದು. ಇಂದು ಜಾತಿ, ಧರ್ಮ, ವರ್ಣ, ಆಧಾರದ ಮೇಲೆ ರ್ಯಾಗಿಂಗ್ ಮಾಡುವ ಪ್ರವೃತ್ತಿ ಬೆಳೆದಿದೆ. ಇದು ಭಾರತೀಯರ ಸಂಸ್ಕೃತಿ ಅಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ನೊಂದು ಕಾಲೇಜು ಬಿಡುವ ಪ್ರಸಂಗಗಳು ನಡೆಯುತ್ತಿವೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಭಯದೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕದೇ ಹಿಂದುಳಿಯಲು ಕಾರಣವಾಗಿದೆ. ಇನ್ನೂ ಯುವಜನತೆಯನ್ನ ತಪ್ಪು ದಾರಿಗೆ ಪ್ರಚೋದನೆ ನೀಡುತ್ತಿರುವುದು ರ್ಯಾಗಿಂಗ್‍ನ ಇನ್ನೊಂದು ಮುಖವಾಗಿದೆ. ಇಂತವುಗಳನ್ನು ಶೈಕ್ಷಣಿಕ ಮಟ್ಟದಲ್ಲಿಯೇ ತಡೆಯಲು ಯು.ಜಿ.ಸಿ. ಯು ರ್ಯಾಗಿಂಗ್‍ನ್ನು ತಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಇಂತಹ ನಿಯಮಗಳನ್ನು ಪತ್ರಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಪಾಲಿಸಿ ಉತ್ತಮ ಶಿಕ್ಷಣವನ್ನು ಪಡೆಯಬೇಕಿದೆ.ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿಯವರು ವಿಶೇಷ ಉಪನ್ಯಾಸಕರನ್ನು ಗೌರವಿಸಿ ನಂತರ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯವಾಗಿ ಮಾತನಾಡುತ್ತ ವಿದ್ಯೆ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳುವ ವಿದ್ಯಾಲಯಗಳಲ್ಲಿ ರ್ಯಾಗಿಂಗ್‍ಗೆ ಬಲಿಯಾಗಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲಾಗದೇ ಕೆಲವೊಂದು ಸಂದರ್ಭಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ನಿದರ್ಶನಗಳು ನಮ್ಮ ಕಣ್ಮುಂದಿವೆ. ಆದರೆ ವಿದ್ಯಾರ್ಥಿಗಳು ಪರಸ್ಪರ ಸ್ನೇಹ ಮನೋಭಾವದಿಂದ ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಇನ್ನೂ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ರ್ಯಾಗಿಂಗ್ ಎನ್ನುವಂತದ್ದು ಕಡಿಮೆ. ಇದು ತಾಂತ್ರಿಕ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಇದು ದೊಡ್ಡದಾದ ಪ್ರಭಾವ ಬೀರಿದೆ. ಇದಕ್ಕೆ ಕಾನೂನಿನಲ್ಲಿ ಕಠಿಣವಾದ ಶಿಕ್ಷೆಯಿದೆ ಹಾಗೂ ಇದು ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಕ್ರಿಮಿನಲ್ ಮೊಕದ್ದಮೆಗಳನ್ನು ಕೂಡ ಜಾರಿಗೆ ತಂದಿರುವುದು ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ರ್ಯಾಗಿಂಗ್ ತಡೆ ಘಟಕದ ನೋಡಲ್ ಅಧಿಕಾರಿಯಾದ ಡಾ. ಜನಾರ್ದನ ರವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಾಗೃತಿಗಾಗಿ ಜಾಥ ಸಹ ಹಮ್ಮಿಕೊಳ್ಳಲಾಗಿತು.
One attachment • Scanned by Gmail