ರ್ಯಾಡ್‍ಂ ಥಾಟ್ಸ್ ಪುಸ್ತಕ ಬಿಡುಗಡೆ

ಕಲಬುರಗಿ,ಆ 19: ನಗರದ ವೀರಮ್ಮ ಗಂಗಸಿರಿ ಮಹಾವಿದ್ಯಾಲಯದಲ್ಲಿ
ಇಂದು ಮಹಾವಿದ್ಯಾಲಯದ ಸಂಸ್ಥಾಪಕ ಪ್ರಾಶುಂಪಾಲರಾದ ಪೆÇ್ರ. ವಿಜಯಲಕ್ಷ್ಮಿ ಗುರುಸಿದ್ದಯ್ಯ ಅವರು ರಚಿಸಿದ ರ್ಯಾಡ್‍ಂ ಥಾಟ್ಸ್ ಪುಸ್ತಕವನ್ನು ಡಾ.ಶೀಲಾ ಸಿದ್ರಾಮ ಅವರು ಬಿಡುಗಡೆ ಮಾಡಿದರು.
ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತಪ್ರಾಚಾರ್ಯರಾದ ಡಾ.ಇಂದಿರಾ ಶೇಟಕಾರ ಅವರು ಪುಸ್ತಕ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ರಾಜೇಂದ್ರ ಕೊಂಡಾ ವಹಿಸಿದ್ದರು. ಸಾಕ್ಷಿ ಪ್ರಾರ್ಥನಾ ಗೀತೆ ಹಾಡಿದರು. ಡಾ. ಚಂದ್ರಕಲಾ ಪಾಟೀಲ್ ಸ್ವಾಗತಿಸಿದರು. ಡಾ. ಮಹೇಶ ಗಂವ್ಹಾರ ಕಾರ್ಯಕ್ರಮನಿರೂಪಿಸಿದರು.ಉಮಾ ರೇವೂರ್ ವಂದಿಸಿದರು.ವೇದಿಕೆಯ ಮೇಲೆ ಉಪ ಪ್ರಾಚಾರ್ಯರುಗಳಾದ ಡಾ. ವೀಣಾ ಎಚ್ ಮತ್ತು ಉಮಾ ರೇವೂರ ಮತ್ತು ಡಾ. ಅಂಕಿತಾ ಉಪಸ್ಥಿತರಿದ್ದರು.ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾಥಿನಿಯರು ಪಾಲ್ಗೊಂಡರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕ ಡಾ. ಮೋಹನರಾಜ ಪತ್ತಾರ ತಿಳಿಸಿದ್ದಾರೆ.