
ಹೈದರಾಬಾದ್,ಸೆ.೧೨- ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ರ್‍ಯಾಗಿಂಗ್ ಮಾಡಿದ ಆರೋಪದ ಮೇಲೆ ಗಾಂಧಿ ವೈದ್ಯಕೀಯ ಕಾಲೇಜಿನ ಎರಡನೇ ಮತ್ತು ಮೂರನೇ ವರ್ಷದ ಹತ್ತು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಒಂದು ವರ್ಷದವರೆಗೆ ಅಮಾನತುಗೊಳಿಸಲಾಗಿದೆ.ಅಮಾನತುಗೊಂಡಿರುವ ಹತ್ತು ವಿದ್ಯಾರ್ಥಿಗಳು ಒಂದು ವರ್ಷದ ಅವಧಿಗೆ ಹಾಸ್ಟೆಲ್‌ಗೆ ಪ್ರವೇಶವಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.ಒಂದು ತಿಂಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ರಾಜ್ಯ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.ಮೊದಲ ವರ್ಷದ ವಿದ್ಯಾರ್ಥಿಗಳು ಯುಜಿಸಿಯ ರ್‍ಯಾಗಿಂಗ್ ವಿರೋಧಿ ಸಮಿತಿಯನ್ನು ಸಂಪರ್ಕಿಸಿ, ಮಧ್ಯರಾತ್ರಿ ೨ ಗಂಟೆಗೆ ತಮ್ಮನ್ನು ಕರೆದು ಡ್ಯಾನ್ಸ್ ಮಾಡಿ, ತಮಾಷೆ ಮಾಡಿ, ನಿಂದಿಸಿದ ಆರೋಪದ ಕುರಿತು ಎರಡು ಮತ್ತು ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ವಿರುದ್ದ ದೂರು ನೀಡಿದ್ದರು.”ರ್‍ಯಾಗಿಂಗ್ ನಿಂದ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳವಾಗಿದೆ. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ ಯುಜಿಸಿ ರ್‍ಯಾ ರ್‍ಯಾಗಿಂಗ್ ವಿರೋಧಿ ಸಮಿತಿ, ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.”ಯುಜಿಸಿಯಿಂದ ಆದೇಶವನ್ನು ಸ್ವೀಕರಿಸಿದ ನಂತರ, ಮತ್ತೆ ಸಮಿತಿ ರಚಿಸಿ, ಮೊದಲ ವರ್ಷದ ವಿದ್ಯಾರ್ಥಿಗಳು ಮತ್ತು ೧೦ ಹಿರಿಯರೊಂದಿಗೆ ಹಲವಾರು ಸುತ್ತಿನ ಸಭೆ ನಡೆಸಲಾಗಿತ್ತು.ಸಭೆಯಲ್ಲಿ ರಾಗಿಂಗ್ ಮಾಡಿರುವುದು ಧೃಡಪಟ್ಟ ಹಿನ್ನೆಲೆಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿ ಒಂದು ವರ್ಷ ಅನಾಮತ್ತು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಮಾನತು ಆದೇಶ ಹೊರಡಿಸಿರುವ ವೈದ್ಯಕೀಯ ಶಿಕ್ಷಣ ನಿರ್ದೇಶಕರುಮಾತನಾಡಿ, ಇಂತಹ ಚಟುವಟಿಕೆಗಳಿಂದ ದೂರವಿರುವಂತೆ ಎಲ್ಲ ಹಿರಿಯ ವಿದ್ಯಾರ್ಥಿಗಳಿಗೆ ಈ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು.ಆದರೂ ಪದೇ ಪದೇ ಈ ಘಟನೆಗಳಿಂದ ಸಂಸ್ಥೆಗೂ ಕೆಟ್ಟ ಹೆಸರು ತರುತ್ತಿದ್ದಾರೆ ಎಂದಿದ್ದಾರೆ.