ರ್‍ಯಾಂಕ್ ಪಡೆದ ವಿದ್ಯಾರ್ಥಿಗೆ ಸಚಿವ ಬೋಸುರಾಜುರವರಿಂದ ಸನ್ಮಾನ

ರಾಯಚೂರು,ಜೂ.೨೦-
೨೦೨೩ರ ನೀಟ್ ಪರೀಕ್ಷೆಯಲ್ಲಿ ೭೦೫ ಅಂಕಗಳನ್ನು ಗಳಿಸಿ ಆಲ್ ಇಂಡಿಯಾ ೧೨೭ನೇ ರ್‍ಯಾಂಕ್ ಮತ್ತು ಕರ್ನಾಟಕ-ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೨ನೇ ರ್‍ಯಾಂಕ್ (ಃ.Sಛಿ ಂgಡಿiಛಿuಟಣಡಿuಡಿe) ಹಾಗೂ ಇಇ-ಚಿಜvಚಿಟಿಛಿeಜ ಪರೀಕ್ಷೆಯಲ್ಲಿ ಸಿಆರ್‌ಎಲ್ ೧೮೧೬ ರ್‍ಯಾಂಕ್ ಪಡೆದ ನಗರದ ಪ್ರಮಾಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಕುಮಾರ. ಅನುರಾಗ ರಂಜನ್ ತಂದೆ ಡಾ. ದಿನ್ ಪ್ರಕಾಶ ರಂಜನ್ ಇವರಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ರವರು ಇಂದು ತಮ್ಮ ನಿವಾಸದಲ್ಲಿ ಸನ್ಮಾನ ಮಾಡಿದರು.
ವಿದ್ಯಾರ್ಥಿಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ನಗರದ ವಿದ್ಯಾರ್ಥಿ ಈ ಸಾಧನೆ ಮಾಡಿರುವುದು ತಮಗೆ ಹೆಮ್ಮೆಯ ಸಂಗತಿ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.
ಈ ಸಾಧನೆಗೆ ಪರೋಕ್ಷವಾಗಿ ಕಾರಣರಾದ ಪೋಷಕರು ಹಾಗೂ ಕಾಲೇಜಿನ ಉಪನ್ಯಾಸಕರನ್ನು ಸಚಿವರು ಪ್ರಶಂಸಿಸಿದರು. ಈ ಸಮಯದಲ್ಲಿ ವಿದ್ಯಾರ್ಥಿಯ ತಂದೆ ದಿನ್ ಪ್ರಕಾಶ ರಂಜನ್, ತಾಯಿ ನಮಿತಾ ಹಾಗೂ ಕಾಲೇಜಿನ ಉಪನ್ಯಾಸಕರಾದ ಬಸವರಾಜ ಪಲ್ಲೇದ ಮತ್ತು ಶ್ರೀನಿವಾಸ ರಾವ್ ಇವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ನೂತನವಾಗಿ ಆಯ್ಕೆಯಾಗಿರುವ ಮಾನ್ಯ ಸಚಿವರಿಗೆ ಸನ್ಮಾನಿಸಲಾಯಿತು.