ರೌಡಿ ಸಿದ್ದಾಪುರ ಮಹೇಶ್ ಕೊಲೆ; ನಾಗ, ಮೋಹನ ಕೋರ್ಟ್ ಗೆ ಶರಣು

ಬೆಂಗಳೂರು,ಆ.೧೮-ಜೈಲಿನಿಂದ ಬಿಡುಗಡೆಯಾಗಿ ಬರುತ್ತಿದ್ದ ರೌಡಿ ಸಿದ್ದಾಪುರ ಮಹೇಶ್ ನನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಡಬಲ್ ಮೀಟರ್ ಮೋಹನ ಇಬ್ಬರೂ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ನಗರದ ೯ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾದ ವಿಲ್ಸನ್ ಗಾರ್ಡನ್ ನಾಗ ಹಾಗೂ ಡಬಲ್ ಮೀಟರ್ ಮೋಹನನ ವಿಚಾರಣೆ ನಡೆಸಿದ ನ್ಯಾಯಾಧೀಶರು ಇದೇ ಆ. ೨೮ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೌಡಿ ಶೀಟರ್ ಮಹೇಶ ಅಲಿಯಾಸ್ ಸಿದ್ದಾಪುರ ಮಹೇಶ್ ಅ.೪ರ ರಾತ್ರಿ ೯:೨೦ರ ವೇಳೆ ಜಾಮೀನಿನ ಮೇಲೆ ಬಿಡುಗಡೆಗೊಂಡು ಇಯಿಟೋಸ್ ಕಾರಿನಲ್ಲಿ ಜೈಲಿನಿಂದ ಮನೆ ಕಡೆ ಹೊರಟಿದ್ದ.
ಸುಮಾರು ೯:೪೫ರ ಸಮಯಕ್ಕೆ ಹೊಸೂರ್ ರೋಡ್ ಸಿಗ್ನಲ್ ಬಳಿಗೆ ಬಂದಾಗ ಏಕಾಏಕಿ ಕಾರಿಗೆ ಅಡ್ಡಬಂದಿದ್ದ ಆರೇಳು ಮಂದಿ ಮಚ್ಚು ಬೀಸಿದ್ದು, ಮಹೇಶ ಕಾರಿನಿಂದ ಕೆಳಗೆ ಇಳಿದು ವಾಪಸ್ಸು ಹಿಂದಕ್ಕೆ ಓಡಿ ರಕ್ಷಣೆಗೆ ಕೂಗಿಕೊಂಡರೂ ಬಿಡದ ದುಷ್ಕರ್ಮಿಗಳು ಸುಮಾರು ನೂರು ಮೀಟರ್ ದೂರ ಅಟ್ಟಾಡಿಸಿ ನಡು ರಸ್ತೆಯಲ್ಲಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದರು.
ವಿಲ್ಸನ್ ಗಾರ್ಡನ್ ನಾಗನ ಗೆಳೆಯನನ್ನು ಕೊಲೆ ಮಾಡಿದ್ದ ಮೃತ ರೌಡಿಶೀಟರ್ ಮಹೇಶ ೨೦೨೧ ರಲ್ಲಿ ವಿಲ್ಸನ್ ಗಾರ್ಡನ್ ನಾಗನ ಗೆಳೆಯನಾದ ಮದನ್ ಅಲಿಯಾಸ್ ಪಿಟೀಲ್ ನನ್ನು ತನ್ನ ತಂಡದೊಂದಿಗೆ ಬನಶಂಕರಿ ದೇವಾಲಯದ ಬಳಿಯ ರಸ್ತೆಯಲ್ಲಿ ಅಡ್ಡಹಾಕಿ ಕೊಚ್ಚಿ ಕೊಲೆ ಮಾಡಿದ್ದ.
ಹೀಗಾಗಿ ಆರೋಪಿ ನಾಗನಿಗೆ ಗೆಳೆಯನನ್ನ ಹತ್ಯೆ ಮಾಡಿದವನಿಗೆ ಮುಗಿಸುವ ಸಂಚು ಹೊಡಿದ್ದು, ವಿಚಾರ ತಿಳಿದ ಮಹೇಶ ಕೂಡ ನಾಗನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದ.
ಜೀವ ಭಯಕ್ಕೆ ಹಳೆ ಕೇಸ್ ಹಾಕಿಸಿಕೊಂಡು ಜೈಲು ಸೇರಿದ್ದ ಮಹೇಶ ಆ.೪ ರಂದು ಜಾಮೀನು ಪಡೆದಿದ್ದ ಮಹೇಶ ರಾತ್ರಿ ಒಂಬತ್ತು ಇಪತ್ತಕ್ಕೆ ಜೈಲಿನಿಂದ ಹೊರ ಬಂದಿದ್ದ. ಕಾರಿನಲ್ಲಿ ಮಹೇಶ ಹಾಗೂ ಹಿಂಬದಿ ಸ್ಕೂಟರ್?ನಲ್ಲಿ ಆತನ ಪತ್ನಿ ಬರುತ್ತಿದ್ದಾಗಲೇ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಘಟನೆ ಸಂಭಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದರು. ಇದೀಗ ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.