
ಕನ್ನಡದಲ್ಲಿ ಇತ್ತೀಚೆಗೆ ಮೂಡಿ ಬರುತ್ತಿರುವ ಶೀರ್ಷಿಕೆಗಳು ಗಮನ ಸೆಳೆಯುತ್ತಿವೆ.ಇದೀಗ ರೌಡಿಸಂ ಕಥೆಗೆ “ಸ್ಟಾರ್” ಕಳೆ ಬಂದಿದೆ. ನಕ್ಷತ್ರ ಆಕಾರದ ಶೀರ್ಷಿಕೆ ಮೂಲಕ ನಿರ್ದೇಶಕರಾದ ಪತಿ, ಪತ್ನಿ ಅನು ಮತ್ತು ಮಂಜು ವಿಜಯ್ ಸೂರ್ಯ ವಿಭಿನ್ನ ಪ್ರಯತ್ನ ಮಾಡಲು ಮುಂದಾಗಿದ್ದಾರೆ.
ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವ ಶರತ್, ಚಿತ್ರಕ್ಕೆ ನಿರ್ಮಾಪಕ ಕೂಡ. ಕಳೆದ ವಾರ ಮುಹೂರ್ತವಿತ್ತು. ಶಾಸಕ ರವಿ ಸುಬ್ರಮಣ್ಯ ಪ್ರಥಮ ದೃಶ್ಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ವೇಳೆ ,ಮಾತಿಗಿಳಿದ ನಟ, ನಿರ್ಮಾಪಕ ಶರತ್ ,ಈ ಹಿಂದೆ ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿದ್ದೆ, ರಂಗಭೂಮಿ ಹಿನ್ನೆಲೆಯ ಇದೆ. ರೌಡಿಸಂ ಆಧಾರಿತ ಕಥೆ. ಕ್ಲೈಮ್ಯಾಕ್ಸ್ ನೋಡಿ ಹೊರಬರುವ ಮಂದಿಯ ಕಣ್ಣಲ್ಲಿ ನೀರು ಬರುತ್ತದೆ, ಚಿತ್ರದಲ್ಲಿ ಒಂದಷ್ಟು ನೈಜ ಘಟನೆ ಹೇಳಿದರೂ, ಯಾರ ಹೆಸರನ್ನೂ ಬಳಸಿಕೊಳ್ಳುವುದಿಲ್ಲ ಎನ್ನುವ ಮಾಹಿತಿ ಹಂಚಿಕೊಂಡರು.
ನಿರ್ದೇಶಕ ಮಂಜು ವಿಜಯಸೂರ್ಯ ಚಿತ್ರದ ಶೀರ್ಷಿಕೆಯೇ ಕಥೆ ಹೇಳುತ್ತದೆ. ಭೂಗತ ಲೋಕದ ಕಥೆ ಇದು.ನಾಯಕನಿಗೆ ನಾಯಕಿ ಹೇಗೆ ಬೆಂಬಲವಾಗಿ ನಿಲ್ತಾರೆ ಎನ್ನುದು ತಿರುಳು.ಸ್ಥಳೀಯ ಕಥೆ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ಹೆಚ್ಚು ಭಾಗದ ಚಿತ್ರೀಕರಣ ಮಾಡುತ್ತೇವೆ. ಹೊಡೆದಾಟಕ್ಕಿಂತ ಹೆಚ್ಚಾಗಿ ಥ್ರಿಲ್ಲರ್ ಮೇಲೆ ಗಮನ ಹರಿಸಿದ್ದೇವೆ.ಕುತೂಹಲ ಮೂಡಿಸುವ ಕಂಟೆಂಟೆ ಸಿನಿಮಾ ಎಂದರು.
ಮತ್ತೊಬ್ಬ ನಿರ್ದೇಶಕಿ ಅನು ಮಾತನಾಡಿ ಸ್ಕ್ರಿಪ್ಟ್ ಕೆಲಸದಲ್ಲಿ ಜಾಸ್ತಿ ಇನ್‍ವಾಲ್ ಆಗಿದ್ದೇನೆ ಎಂದರೆ, ನಟಿ ರಜತ ರಕ್ಷ ,ನಾಯಕನಿಗೆ ಬೆಂಬಲವಾಗಿ ನಿಲ್ಲುವ ಪಾತ್ರ ಎಂದರೆ ಛಾಯಾಗ್ರಾಹಕ ಪ್ರವೀಣ್ ಎಂ, ಪ್ರಭು ಮಾತನಾಡಿ ಕಪಾಲ ನಂತರ ಮೂರನೇ ಚಿತ್ರ. ರಿಯಲಿಸ್ಟಿಕ್ ಆಗಿ ಸಿನಿಮಾ ಚಿತ್ರೀಕರಣ ಮಾಡಲು ಉದ್ದೇಶಿಸಲಾಗಿದೆ ಎಂದರು. ವಿಕಾಸ್ ವಸಿಷ್ಠ ಸಂಗೀತದಲ್ಲಿ ನಾಲ್ಕು ಹಾಡುಗಳಿವೆ.