ರೌಡಿಶೀಟರ್ ನಿಂದ ತೆರವುಗೊಳಿಸಲು ಕೂಡ್ಲಿಗಿ ಡಿವೈಎಸ್ ಪಿ ಗೆ ಡಿವೈಎಫ್ ಐ ಮನವಿ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.13 :- ಕಳೆದ 2016ರಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್ ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದವರ ವಿರುದ್ಧ ಹಾಕಲಾಗಿರುವ ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಕೆಲವರ ವಿರುದ್ಧ  ರೌಡಿ ಶೀಟರ್ ಪಟ್ಟಿಗೆ ಸೇರಿಸಿದ್ದು  ಪಟ್ಟಿಯಿಂದ ತೆರವುಗೊಳಿಸುವಂತೆ ಇಂದು ಕೂಡ್ಲಿಗಿ ಡಿವೈಎಸ್ ಪಿ ಗೆ ಡಿವೈ ಎಫ್ ಐ ನ ಮುಖಂಡರು ಮನವಿ ಸಲ್ಲಿಸಿದರು.2016ರಲ್ಲಿ ತೋರಣಗಲ್ಲು ಗ್ರಾಮದಲ್ಲಿ ಕಾನೂನಾತ್ಮಕವಾಗಿ  ಸ್ಥಳೀಯರ ಒಪ್ಪಿಗೆ ಪಡೆಯದೇ ಈಸಿಪಿಎಲ್ ಡಾಂಬರು ಕಾರ್ಖಾನೆ ಸ್ಥಾಪನೆಗೆ ಜಿಂದಾಲ್ ಕಂಪನಿ ಮುಂದಾದಾಗ ಅದನ್ನು ವಿರೋಧಿಸಿ ಸಮಿತಿ ಸ್ಥಾಪಿಸಿ 2016ಸೆಪ್ಟೆಂಬರ್ 27ರಂದು ತೋರಣಗಲ್ಲು ಗ್ರಾಮಪಂಚಾಯತಿ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗಿತ್ತು ಆ ಸಮಯದಲ್ಲಿ ಜಿಂದಾಲ್ ನ ಒಳಸಂಚಿನಲ್ಲಿ ಅರ್ಜುನ, ಈರಣ್ಣ ಶೇಕ್ಷಾವಲಿ, ಲೋಕೇಶ್, ಲಕ್ಷ್ಮಣ ಸೇರಿದಂತೆ  ಇತರೆ  32ಜನ ಡಿವೈಎಫ್ ಐ  ಮುಖಂಡರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಿ ಬಳ್ಳಾರಿ ಜೈಲುವಾಸ ಸಹ ಅನುಭವಿಸಲಾಗಿದ್ದು ರೌಡಿಶೀಟರ್ ಪಟ್ಟಿಯಲ್ಲಿ ಸೇರಿಸಲಾಗಿದ್ದು ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿದ್ದು ರೌಡಿಶೀಟರ್ ಪಟ್ಟಿಯಿಂದ ತೆರವುಗೊಳಿಸಬೇಕೆಂದು ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೂಡ್ಲಿಗಿ ಡಿವೈ ಎಸ್ ಪಿ ಹರೀಶರೆಡ್ಡಿಗೆ ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಅರ್ಜುನ್, ಅಜೇಯ್, ಮಸ್ತಾನ್, ಮಂಜುನಾಥ್, ಈರಣ್ಣ, ಶಿವಕುಮಾರ್, ಅಲಿಭಾಷಾ ಹಾಗೂ ಕೂಡ್ಲಿಗಿ  ಸಿಐಟಿಯು ನ  ಅಧ್ಯಕ್ಷ ಗುನ್ನಳ್ಳಿ ರಾಘವೇಂದ್ರ ಹಾಗೂ ಇತರರು ಮನವಿ ಸಲ್ಲಿಸಿದರು.