
ಬೆಂಗಳೂರು, ಏ.೧೦-ಉತ್ತರಹಳ್ಳಿಯ ಇಟ್ಟಮಡುವಿನ ಬಾರ್ ವೊಂದರಲ್ಲಿ ನಿನ್ನೆ ರಾತ್ರಿ ನಡೆದ ಇಬ್ಬರು ರೌಡಿಗಳ ಕಾಳಗದಲ್ಲಿ ಓರ್ವನನ್ನು ಬಿಯರ್ ಬಾಟಲಿಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ.ಕುಖ್ಯಾತ ರೌಡಿ ಶಿವರಾಜ್ ಕೊಲೆಯಾದವರು, ಕೃತ್ಯ ನಡೆಸಿ ಪರಾರಿಯಾಗಿರುವ ಮತ್ತೊಬ್ಬ ರೌಡಿ ಮಂಜ ಅಲಿಯಾಸ್ ಪೋಲಾರ್ ಬಂಧನಕ್ಕೆ ಸುಬ್ರಹ್ಮಣ್ಯಪುರ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ.ಉತ್ತರಹಳ್ಳಿಯ ಇಟ್ಟಮಡುವಿನ ಸ್ಪೈಸ್ ಬಾರ್?ನಲ್ಲಿ ರಾತ್ರಿ ೧೦.೩೦ರ ವೇಳೆ ಕಂಠಪೂರ್ತಿ ಕುಡಿದ ರೌಡಿಗಳಾದ ಮಂಜ ಅಲಿಯಾಸ್ ಪೋಲಾರ್??? ಹಾಗೂ ಶಿವರಾಜ್ ನಡುವೆ ಗಲಾಟೆಯಾಗಿದ್ದು ವಿಕೋಪಕ್ಕೆ ತಿರುಗಿದಾಗ ಮಂಜ ಎಂಬುವವನು ಬಿಯರ್ ಬಾಟಲ್?ನಿಂದ ಶಿವರಾಜ್? ತಲೆಗೆ ಹೊಡೆದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ಶಿವರಾಜ್?ನನ್ನ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಸಾವನಪ್ಪಿದ್ದಾನೆ. ಕೊಲೆಯಾದ ಶಿವರಾಜ್ ಸಿಕೆ ಅಚ್ಚುಕಟ್ಟು ಠಾಣೆಯ ರೌಡಿಶೀಟರ್ ಆಗಿದ್ದು, ವೃತ್ತಿಯಲ್ಲಿ ಪೇಂಟರ್? ಆಗಿ ಕೆಲಸ ಮಾಡುತ್ತಿದ್ದು ರೌಡಿ ಮಂಜು ಸೇರಿದಂತೆ ಮೂರು ಜನ ಆರೋಪಿಗಳ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ರೌಡಿಗಳಾದ ಮಂಜು ಮತ್ತು ಮೃತ ಶಿವರಾಜ್? ಜೊತೆ ಈ ಹಿಂದೆ ಸಣ್ಣಪುಟ್ಟ ಗಲಾಟೆ ಇತ್ತು. ರೌಡಿ ಶಿವರಾಜ್ ತನ್ನ ಮೂವರು ಗೆಳೆಯರ ಜೊತೆಗೆ ಇಟ್ಟಮಡು ರೋಡ್?ನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್?ಗೆ ಹೋಗಿದ್ದು ಕುಡಿದ ನಂತರ ಸಿಕೆ ಅಚ್ಚುಕಟ್ಟು ಮಂಜನ ಜೊತೆಗೆ ಗಲಾಟೆ ಯಾಗಿದೆ.
ಮಾತು ಮಾತಿಗೆ ಶುರುವಾದ ಗಲಾಟೆಯಲ್ಲಿ ಅರೋಪಿ ಮಂಜುಗೆ ಶಿವರಾಜ್ ಹಲ್ಲೆ ಮಾಡಿದ್ದು, ಹೊಡೆದು ಬಾರ್ ನಿಂದ ಹೊರಕ್ಕೆ ಕಳುಸಿದ್ದಾರೆ.ಬಾರ್??ನಿಂದ ಹೊರ ಬಂದು ನಿಂತ ಮಂಜು ಜೊತೆ ಮತ್ತೆ ಗಲಾಟೆ ಶುರುವಾಗಿದೆ. ಬಳಿಕ ಮಂಜನ ಜೊತೆಗೆ ಮತ್ತು ನಾಲ್ಕರಿಂದ ಐದು ಜನರು ಸೇರಿಕೊಂಡಿದ್ದಾರೆ. ಮೊದಲಿಗೆ ಬಿಯರ್ ಬಾಟಲ್?ನಿಂದ ಹೊಡೆದಾಡಿದ್ದಾರೆ. ನಂತರ ರಸ್ತೆ ಬದಿಯ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ.
ಪರಿಣಾಮ ರಸ್ತೆ ಬದಿಯಲ್ಲಿ ಶಿವರಾಜ್ ಬಿದ್ದಿದ್ದಾನೆ. ಘಟನೆ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದೇವೆ ಎಂದರು.