ರೌಡಿಗಳ ಪರೇಡ್ ನಡೆಸಿದ ಖಾಕಿ ಪಡೆ

ಮೈಸೂರು: ಜೂ.26:- ಭಾನುವಾರ ಬೆಳ್ಳಂಬೆಳಗ್ಗೆ ಮೈಸೂರು ಖಾಕಿ ಪಡೆ ರೌಡಿಗಳಿಗೆ ಪರೇಡ್ ನಡೆಸಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದೆ.
ದೇವರಾಜ ಉಪ ವಿಭಾಗದ ಆಲನಹಳ್ಳಿ ಪೆÇಲೀಸ್ ಠಾಣೆ ಆವರಣದಲ್ಲಿ ಉದಯಗಿರಿ, ದೇವರಾಜ, ಲಷ್ಕರ್, ಅಲನಹಳ್ಳಿ, ನಜರ್ಬಾದ್ ಠಾಣೆಗಳ ಎಲ್ಲ ರೌಡಿ ಆಸಾಮಿಗಳನ್ನ ಕರೆಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು.ಸಮಾಜದಲ್ಲಿ ಶಾಂತಿಗೆ ಭಂಗ ತರುವ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಪರೇಡ್ ನಡೆಸಿದ ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ, ನೂತನ ಗೃಹ ಸಚಿವ ಡಾ.ಜಿ.ಪರಮೇಶ್ವರರವರ ಹಾಗೂ ನೂತನ ಡಿಜಿ ಹಾಗೂ ಐಜಿಪಿ ಅಲೋಕ್ ಮೋಹನ್‍ರವರ ಆದೇಶದಂತೆ ರೌಡಿ ಪೆರೇಡ್ ನಡೆಸಲಾಗಿದೆ. ಹಾಗೊಂದು ವೇಳೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದಲ್ಲಿ ಗೂಂಡಾ ಕಾಯ್ದೆಯಂತಹ ಕಾನೂನು ಬಳಸಿ ಹತ್ತಿಕ್ಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪೆÇಲೀಸ್ ಇನ್ಸ್‍ಪೆಕ್ಟ್‍ರ್‍ಗಳಾದ ಪಿ.ಪಿ.ಸಂತೋಷ್, ಜೀವನ್, ಪಿ.ಕೆ.ರಾಜು, ಟಿ.ಬಿ.ಶಿವಕುಮಾರ್ ಇನ್ನಿತರೆ ಸಿಬ್ಬಂದಿಗಳು ಹಾಜರಿದ್ದರು.