ರೋಹಿತ್ ಬಳಗಕ್ಕೆ 7 ವಿಕೆಟ್ ಆಕರ್ಷಕ ಜಯ

ನವದೆಹಲಿ , ಏ 29- ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ಲೀಗ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಮುಂಬೈ ಇಂಡಿಯನ್ಸ್ ಏಳು ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ.


ಮುಂಬೈ ಇಂಡಿಯನ್ಸ್ ಪರ ಕ್ವಿಂಟನ್ ಡೀ ಕಾಕ್ ಅಜೇಯ 70 ರನಗ ಗಳ ನೆರವಿನಿಂದ 18.3 ಓವರ್ ಮೂರ ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು.
ಕೃನಾಲ್ ಪಾಂಡ್ಯ 39 ರನ್ ಗಳಿಸಿದರು.
ಪೊಲಾರ್ಡ್ ಅಜೇಯ ರನ್ ಗಳಿಸಿದರೆ,ನಾಯಕ 14 ರನ್ ಗಳಿಸಿ ನಿರಾಸೆ ಮೂಡಿಸಿದರು. ಕ್ರಿಸ್ ಮೋರಿಸ್ ಎರಡು ವಿಕೆಟ್‌ ಪಡೆದರು.
ಮೊದಲು ಬ್ಯಾಟ್ ಮಾಡಿದ‌‌ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 171 ರನ್ ಗಳ ಸವಾಲಿನ ಮೊತ್ತ ದಾಖಲಿಸಿತು.
ಸಂಜು ಸ್ಯಾಮ್ಸನ್ 42, ಜೋಸ್ ಬಟ್ಲರ್ 41, ಶಿವಂದುಬೆ 35, ಜೈಸ್ವಾಲ್ 32 ರನ್ ಗಳಿಸಿದ್ದರಿಂದ ತಂಡ ಉತ್ತಮ ಮೊತ್ತ ದಾಖಲಿಸಲು ಸಾಧ್ಯವಾಯಿತು.
ಮಿಲ್ಲರ್ ಮತ್ತು ಪರಾಗ್ ಔಟಾಗದೆ ಉಳಿದರು. ರಾಹುಲ್ ಚಹರ್ ಎರಡು, ಬುಮ್ರಾ ಮತ್ತು ಬೋಲ್ಟ್ ಒಂದು ವಿಕೆಟ್‌ ಪಡೆದರು.