ರೋಹಿತ್ ಪಡೆಗೆ ಧೈರ್ಯ ತುಂಬಿದ ಕಪಿಲ್ ದೇವ್

ನವದೆಹಲಿ, ನ.೨೫-ಏಕದಿನ ವಿಶ್ವಕಪ್ ಮುಗಿದು ಆರು ದಿನಗಳು ಕಳೆದರೂ ಕ್ರಿಕೆಟ್ ಅಭಿಮಾನಿಗಳು, ಮಾಜಿ ಆಟಗಾರರು ಭಾರತ ಸೋಲನ್ನು ನೆನೆಯುತ್ತಲೇ ಇದ್ದಾರೆ. ಟೂರ್ನಿಯಲ್ಲಿ ಅಮೋಘ ಆಟವಾಡಿದ ಟೀಂ ಇಂಡಿಯಾ ಫೈನಲ್?ನಲ್ಲಿ ಆಸೀಸ್ ಎದುರು ಸೋಲು ಕಂಡಿತ್ತು. ತೀವ್ರ ನಿರಾಶೆಗೊಂಡ ಭಾರತೀಯ ಆಟಗಾರರಿಗೆ ಇಡೀ ದೇಶವೇ ಬೆಂಬಲ ನೀಡಿದೆ. ಟೀಂ ಇಂಡಿಯಾಗೆ ಮೊದಲ ವಿಶ್ವಕಪ್ ನೀಡಿರುವ ಕಪಿಲ್ ದೇವ್ ಕೂಡ ರೋಹಿತ್ ಸೇನೆಗೆ ಮತ್ತೊಮ್ಮೆ ಧೈರ್ಯ ತುಂಬಿದ್ದಾರೆ. ವಿಶೇಷ ಸಂದೇಶನವೊಂದರಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಾತನಾಡಿದ್ದಾರೆ.
ಇಂದಿನ ಕ್ರಿಕೆಟಿಗರು ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ.. ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಪ್ರತಿ ತಂಡವು ಗೆಲ್ಲಲು ಆಡುತ್ತದೆ. ಕೊನೆಯಲ್ಲಿ, ವಿಜಯಶಾಲಿಯಾಗುವುದು ಮುಖ್ಯ. ಆದರೆ, ಅದಕ್ಕಿಂತ ಹೆಚ್ಚಾಗಿ ಅವರು ಆಡಿದ ರೀತಿಯೂ ಮುಖ್ಯ. ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಎಲ್ಲಾ ತಂಡಗಳು ಇಲ್ಲಿಗೆ ಬಂದಿವೆ. ಫೈನಲ್‌ನಲ್ಲಿ ಆಸೀಸ್ ಉತ್ತಮ ಆಟವಾಡಿತು. ಅದನ್ನು ನಾವು ಗೌರವಿಸಬೇಕು. ನಮ್ಮ ತಂಡದ ಪ್ರದರ್ಶನವನ್ನು ಕಡಿಮೆ ಅಂದಾಜು ಮಾಡಬಾರದು ಎಂದು ಹೇಳಿದರು.
ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಭಾರತ ವಿಫಲವಾಗಿರುವುದು ನನಗೆ ತೀವ್ರ ನಿರಾಸೆ ಮೂಡಿಸಿದೆ. ಏಕೆಂದರೆ ಕೊನೆಯವರೆಗೂ ಅಮೋಘ ಆಟವಾಡಿದರೂ ಕಪ್ ಗೆಲ್ಲಲಿಲ್ಲ ಎಂಬ ನೋವು ಕಾಡುತ್ತಲೇ ಇದೆ. ಆದ್ರೂ ನಾವು ಇಂತಹ ವಿಷಯಗಳಿಂದ ಕಲಿಯಬೇಕು ಮತ್ತು ಭವಿಷ್ಯದಲ್ಲಿ ಅತ್ಯುತ್ತಮವಾಗಿ ಆಡಲು ಪ್ರಯತ್ನಿಸಬೇಕು. ಆಗ ಮಾತ್ರ ವಿಜೇತರಾಗುವ ಅವಕಾಶ ಸಿಗುತ್ತದೆ ಎಂದು ಕಪಿಲ್ ದೇವ್ ಪ್ರತಿಕ್ರಿಯಿಸಿದ್ದಾರೆ.
ಟೀಂ ಇಂಡಿಯಾ ಇದುವರೆಗೆ ಎರಡು ಬಾರಿ ವಿಶ್ವಕಪ್ ಗೆದ್ದಿದೆ. ೧೯೮೩ರಲ್ಲಿ ಕಪಿಲ್ ನಾಯಕತ್ವದಲ್ಲಿ ಮೊದಲ ಬಾರಿಗೆ ಜಯಗಳಿಸಿತ್ತು. ಸುಮಾರು ೨೮ ವರ್ಷಗಳ ನಂತರ ೨೦೧೧ರಲ್ಲಿ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ನಾಯಕತ್ವದಲ್ಲಿ ಎರಡನೇ ಬಾರಿಗೆ ವಿಜೇತರಾದರು. ಆದರೆ, ಈ ಬಾರಿ ಅಪ್ರತಿಮ ಜಯಗಳಿಸಿ ಫೈನಲ್ ತಲುಪಿದ್ದ ಟೀಂ ಇಂಡಿಯಾ ಫೈನಲ್?ನಲ್ಲಿ ಎಡವಿತ್ತು
ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಫೈನಲ್? ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯಾ ಆರನೇ ಬಾರಿಗೆ ಚಾಂಪಿಯನ್? ಪಟ್ಟ ಅಲಂಕರಿಸಿತ್ತು.