ರೋಹಿಣಿ ಮಳೆ: ಸೂರ್ಯಕಾಂತಿ ಬಿತ್ತನೆ ಜೋರು!

ಎಮ್ಮಿಗನೂರು : ಕೋರೋನಾ ಸಾವು ನೋವಿನ ನಡುವೆ ಉತ್ತಮ ಮಳೆಯಿಂದ ಎಮ್ಮಿಗನೂರಿನ ಸುತ್ತಮೂತ್ತಲಿನ ಗ್ರಾಮದ ರೈತರು ಕೃಷಿಯತ್ತ ಮುಖಮಾಡಿದ್ದು. ಗ್ರಾಮೀಣ ಭಾಗದಲ್ಲಿ ರೋಹಿಣಿ ಮಳೆಯಿಂದ ಸೂರ್ಯಕಾಂತಿ ಬಿತ್ತನೆಯಲ್ಲಿ ತೊಡಗಿ ಕೃಷಿ ಚಟುವಟಿಕೆ ಬಿರುಸು ಗೊಂಡಿವೆ
“ರೋಹಿಣಿ ಮಳೆ ಸುರಿದರೆ ಓಣಿಗೆಲ್ಲ ಕಾಳು! ಎಂಬ ಉತ್ತರ ಕರ್ನಾಟಕದಲ್ಲಿ ಜನಜನಿತ ಈ ರೋಹಿಣಿ ಆರ್ಭಟ ಜೋರಾಗಿ ಮಳೆಯಾಗಿದ್ದು, ಎರಡು ವರ್ಷದಿಂದ ಅತಿವೃಷ್ಠಿ ನರೆ ಹಾವಳಿಗೆ ತುತ್ತಾಗಿ ಹಾನಿ ಸಂಭವಿಸಿ ರೈತರು ಕಂಗಾಲಾಗಿದ್ದಾರೆ ಈ ಮುಂಗಾರಿ ಮಳೆಯಿಂದ ಮಳೆ ಶುಭ ಶಕುನವಾಗಿ ಪರಿಣಮಿಸಿದೆ
ಅನ್ನದಾರು ಈ ಭಾಗದಲ್ಲಿ ಸೂರ್ಯಕಾಂತಿ ಬಿತ್ತನೆ ಪ್ರಾರಂಬಿಸಿದ್ದಾರೆ.
ಕಳೇದ ಎರಡು ರಾತ್ರಿ ಸುರಿದ ಧಾರ ಕಾರ ಮಳೆಯಿಂದ ಬಿತ್ತನೆಗೆ ಭೂಮಿ ಸಂಪೂರ್ಣ ಪೂರಕ ಹಸಿಯಾಗಿದ್ದು, ಸಮೀಪದ ಎಚ್ ವೀರಾಪುರ, ಚನ್ನಪಟ್ಟಣ, ಮುದ್ದಟ್ಟೂರು, ಸೂಗೂರು, ಮಾದಾಪುರ, ಹಾವಿನಹಾಳ್, ಭಾಗದಲ್ಲಿ ಭೂಮಿಯಲ್ಲಿ ರೈತರು ಕಳೇದ ಎರಡು ದಿನಗಳಿಂದ ಬಿತ್ತನೆಯಲ್ಲಿ ತೊಡಗಿದ್ದಾರೆ
ಈಗಾಗಲೇ ಮಾಗಿ ಹುಳಿಮೆಗೆ ರೈತರು ಪೂರಕವಾಗಿ ಕೊಟ್ಟಿಗೆ ಗೊಬ್ಬರ ಹೊಲದಲ್ಲಿ ಹಾಕಿದ್ದು, ಈ ಬಿದ್ದಿರುವ ಮಳೆಯಿಂದ ಸೂರ್ಯಕಾಂತಿ ಬಿತ್ತನೆ ಅನುಕೂಲವಾಗಿದ್ದು, ರೈತರು ಮೊಗದಲ್ಲಿ ಸಂತಸ ಕಂಡು ಬಂದಿದೆ ಈ ಗಾಗಲೇ ವ್ಯಾಪ್ತಿಯಲ್ಲಿ ಸೂರ್ಯಕಾಂತಿ ತಳಿಯ ಹಾಗೂ ವಿವಿಧ ತಳಿಯ ಭೀಜ 250 ಹೆಕ್ಟರ್ ಭೂಮಿಯಲ್ಲಿ ಬಿತ್ತನೆ ಕಾರ್ಯಸಾಗಿದೆ
ಪೋಟೋ 01 ಎಮ್ಮಿಗನೂರು ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ರೋಹಿಣಿ ಮಳೆಯಿಂದ ರೈತರು ಸೂರ್ಯಕಾಂತಿ ಬಿತ್ತನೆಯಲ್ಲಿ ತೊಡಗಿದ್ದಾರೆ