ರೋಮಾಂಚನಗೊಳಿಸಿದ ಟಗರಿನ ಕಾಳಗಗಜನಿ-ತಾಲಿಬಾಯಿ ರೋಚಕ ಸೇಣಸಾಟ ; ಬಹುಮಾನ ವಿತರಣೆ

ತಾಳಿಕೋಟೆ:ಜೂ.26: ಪಟ್ಟಣದ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಜಾತ್ರಾ ಮಹೋತ್ಸವ ಅಂಗವಾಗಿ ರವಿವಾರರಂದು ಬಸ್ ನಿಲ್ದಾಣದ ಎದುರಿನ ಕನ್ನಡ ಶಾಲಾ ಮೈಧಾನದಲ್ಲಿ ಆಯೋಜಿಸಲಾದ ಟಗರಿನ ಕಾಳಗವು ನೋಡುಗ ಜನರ ರೋಮಾಂಚನಗೊಳಿಸುವ ನಿಟ್ಟಿನಲ್ಲಿ ಟಗರುಗಳು ಗೆಲುವಿಗಾಗಿ ರೋಚಕ ಸೇಣಸಾಟ ನಡೆಸಿದ್ದು ಕಂಡುಬಂದಿತು.

ಅದರಲ್ಲಿ ಕೊನೆಗಳಿಗೆಯಲ್ಲಿ ಗಜನಿ ಎಂಬ ಟಗುರು ಮತ್ತು ತಾಲಿಬಾಯಿ ಎಂಬ ಟಗರು ಗೆಲುವಿಗಾಗಿ ಸಾಕಿದ ಟಗರಿನ ಮಾಲಿಕನ ಮಾತುಗಳಂತೆ ರೋಚಕವಾಗಿ ಸೇಣಸಾಟ ನಡೆಸಿದ್ದು ಒಂದೇಡೆ ರೋಮಾಂಚನದಂತೆ ಕಂಡುಬಂದರೂ ಕೂಡಾ ನೋಡುಗರಿಗೆ ಅತ್ಯಂತ ಖುಷಿತಂದುಕೊಟ್ಟಿತು.

ಟಗರಿನ ಕಾಳಗದಲ್ಲಿ ಟಗರಿನ ಮಾಲಿಕರು ಟಗರಿಗೆ ಇಟ್ಟಂತ ಹೆಸರಿನಂತೆ ಗಜನಿ ನೀರಲಕೇರಿ ಪ್ರಥಮ ಸ್ಥಾನ ಪಡೆದರೆ, ತಾಲಿಬಾಯಿ ಚಿಕ್ಕೇರಿ ದ್ವೀತೀಯ ಸ್ಥಾನ ಪಡೆದುಕೊಂಡಿತು. ಅದರಂತೆ ತೃತೀಯ ಸ್ಥಾನವನ್ನು ರಾಯಲ್ ಸ್ಪೀಡ್ ಎಂಬ ಟಗರು ಪಡೆದುಕೊಂಡಿತು.

ಈ ಟಗರಿನ ಕಾಳಗದ ಪ್ರಥಮ ಭಹುಮಾನ 51 ಸಾವಿರ ರೂ. ಮತ್ತು ಸೀಲ್ಡನ್ನು ಟಗರಿನ ಕಾಳಗದ ಪ್ರಾಯೋಜಕರಾದ ಜಗದಂಬಾ ಮೋಬೈಲ್ಸ್‍ನ ಮಾಲಿಕರಾದ ಕೃಷ್ಣಾ ಸಾವಜಿ, ದ್ವಿತೀಯ ಭಹುಮಾನ 25 ಸಾವಿರ ರೂ. ಮತ್ತು ಸೀಲ್ಡನ್ನು ಯುವ ಉದ್ಯಮಿ ವೀರೇಶ ಬಾಗೇವಾಡಿ, ತೃತೀಯ ಭಹುಮಾನ 11 ಸಾವಿರ ರೂ. ಮತ್ತು ಸೀಲ್ಡನ್ನು ಪ್ರಥಮದರ್ಜೆ ಗುತ್ತಿಗೆದಾರ ನಿಂಗನಗೌಡ ಬಿರಾದಾರ(ಅಗ್ನಿ) ಜಾತ್ರಾ ಉತ್ಸವ ಮಂಡಳಿಯ ನೇತೃತ್ವದಲ್ಲಿ ನೀಡಿದರು.

ಈ ಟಗರಿನ ಕಾಳಗದಲ್ಲಿ ಒಟ್ಟು 23 ಟಗರುಗಳು ಪಾಲ್ಗೊಂಡಿದ್ದವಲ್ಲದೇ ಈ ಟಗರಿನ ಕಾಳಗದ ನಿರ್ಣಾಯಕರಾಗಿ ಕುಮಾರ ರಾಠೋಡ, ಶರಣಗೌಡ ಗೌಡಪ್ಪಗೋಳ, ಪುಂಡಲಿಕ ಪೂಜಾರಿ ಅವರು ಕಾರ್ಯನಿರ್ವಹಿಸಿದರು.

ಈ ಸಮಯದಲ್ಲಿ ಶಿವು ಪಾಟೀಲ, ಮಲ್ಲನಗೌಡ ಗೌಡಪ್ಪಗೌಡ ಪಾಟೀಲ, ವೀಠಲ ಮೋಹಿತೆ, ಸಂತೋಷ ಡಿಸಲೆ, ನಾಗರಾಜ ಪತ್ತಾರ, ಪ್ರವೀಣ್ ಪಾಟೀಲ, ಸಿದ್ದು ಸಾಳುಂಕೆ, ಶಿವು ಹಿರೇಮಠ, ಅಕ್ಷಯ ಚವ್ಹಾಣ, ಪ್ರವೀಣ್ ಸಜ್ಜನ ಮೊದಲಾದವರು ಇದ್ದರು.