ರೋನಿ ಟೀಸರ್ ಬಿಡುಗಡೆ

ವಿಭಿನ್ನ ಕಥಾಹಂದರ ಹೊಂದಿರುವ ‘ರೋನಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮುಂಬೈನಲ್ಲಿದ್ದು ಕೊಂಡು ಕನ್ನಡ ಚಿತ್ರಗಳ ಡಬ್ಬಿಂಗ್ ಹಕ್ಕು ಖರೀದಿ ಮಾಡುತ್ತಿದ್ದ ಎಂ.ರಮೇಶ್ ಹಾಗೂ ಪವನ್‍ಕುಮಾರ್  ಚಿತ್ರಕ್ಕೆ ಬಂಡವಾಳ ಹಾಕಿದ್ದು ಕಿರಣ್.ಆರ್.ಕೆ  ಆಕ್ಷನ್‍ಕಟ್ ಹೇಳಿದ್ದಾರೆ.

ಬೆಂಗಳೂರು, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ.

ಚಿತ್ರದ ಕುರಿತು ನಿರ್ದೇಶಕ ಕಿರಣ್ ಕುಮಾರ್,ಉನ್ನತ ಮಟ್ಟದ ಕೇಸ್ ನಡೆಯುವ ಕಥೆಯಲ್ಲಿ ಶ್ರೀಮಂತ ಹುಡುಗಿ ಮನೆಯಲ್ಲಿರುವ ಮೂವತ್ತು ಕೋಟಿ ದರೋಡೆ ಆಗುತ್ತದೆ.ತನಿಖೆ ನಡೆಸಲು ಎಸಿಪಿ ಅಧಿಕಾರಿಯೊಬ್ಬರು ನೇಮಕಗೊಳ್ಳುತ್ತಾರೆ. ಅವರಿಂದ ಇದನ್ನು ಹುಡುಕಲಾಗದ ಪರಿಸ್ಥಿತಿಯಿಂದ ವರ್ಗಾವಣೆಗೊಳ್ಳುತ್ತಾರೆ. ಬಳಿಕ ಸಿಸಿಬಿ ಅಧಿಕಾರಿಗೆ ಬರುತ್ತದೆ. ಇದರ ಮಧ್ಯೆ ಎರಡು ಕೊಲೆಗಳು ನಡೆಯುತ್ತದೆ. ಎರಡಕ್ಕೂ ಒಂದೇ ಸಾಮ್ಯತೆ ಇರುತ್ತದೆ. ಕೊಲೆ ಮಾಡಿದವರು ಯಾರು ಎನ್ನವುದು ಚಿತ್ರದ ಕುತೂಹಲ ಎಂದು ಮಾಹಿತಿ ಹಂಚಿಕೊಂಡರು.

ನಾಯಕ ಧರ್ಮಕೀರ್ತಿರಾಜ್, ಬಾಂಬೆ ಮೂಲದ ರುತ್ವಿಪಟೇಲ್ ನಾಯಕಿ. ತಿಲಕ್ ಕೀರ್ತಿರಾಜ್, ವರ್ದನ್, ರಘುಪಾಂಡೇಶ್ವರ್, ಬಲರಾಜವಾಡಿ, ರತನ್‍ಕರತಮಾಡ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ಲಿಯೋ ಎನ್ನುವ ನಾಯಿ ಸಹ ಪ್ರಮುಖ ಪಾತ್ರ ನಿರ್ವಹಿಸಿದೆ. ಕವಿರಾಜ್-ಕಿನ್ನಾಳ್‍ರಾಜ್ ಸಾಹಿತ್ಯದ ಹಾಡುಗಳಿಗೆ  ಆಕಾಶ್‍ಪರ್ವ ಸಂಗೀತ, ವೀನಸ್‍ನಾಗರಾಜಮೂರ್ತಿ, ಛಾಯಾಗ್ರಹಣವಿದೆ.

ಇದೇ ಸಂಸ್ಥೆ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದು ಪ್ರಜ್ವಲ್‍ದೇವರಾಜ್ ನಾಯಕರಾಗಿ ಆಯ್ಕೆಯಾಗಿ, ರಿತ್ವಿ ಪಟೇಲ್ ಈ ಚಿತ್ರಕ್ಕೂ ನಾಯಕಿ