ರೋಣಿಹಾಳದಲ್ಲಿ ಗುಂಡಿನ ದಾಳಿ; ಓರ್ವ ವ್ಯಕ್ತಿಗೆ ಗಾಯ

ವಿಜಯಪುರ,ಜ.22:ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಕೊಲ್ಹಾರ ತಾಲ್ಲೂಕಿನ ರೋಣಿಹಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ರಾಜು ಗುರಸಿದ್ದಪ್ಪ ನ್ಯಾಮಗೊಂಡ (38) ಎಂಬುವರ ಮೇಲೆ ಗುಂಡಿನ ದಾಳಿ ನಡೆದಿದೆ.
ಶಿವಾನಂದ ಬಸಗೊಂಡಪ್ಪ ಜಗದಾಳೆ (30) ಎಂಬುವರು ರಾಜು ನ್ಯಾಮಗೊಂಡ ಅವರ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಎರಡು ಗುಂಡುಗಳು ರಾಜುನ ಬೆನ್ನಿಗೆ ತಗುಲಿದ್ದು, ಗುಂಡಿನ ದಾಳಿಗೊಳಗಾದ ರಾಜು ನ್ಯಾಮಗೊಂಡ ಎಂಬುವರನ್ನು ಚಿಕಿತ್ಸೆಗಾಗಿ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ತಿಳಿಸಿದ್ದಾರೆ.
ಹಳೆಯ ವೈಷಮ್ಯ ಹಿನ್ನಲೆ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಗುಂಡು ಹಾರಿಸಿದ ಶಿವಾನಂದ ಜಗದಾಳೆ ಪರಾರಿಯಾಗಿದ್ದು, ಪೆÇಲೀಸರು ಆರೋಪಿಯನ್ನು ಪತ್ತೆ ಹಚ್ಚಲು ತೀವ್ರ ಶೋಧನೆ ನಡೆಸಿದ್ದಾರೆ.
ಇಬ್ಬರೂ ಸಂಬಂಧಿಕರಾಗಿದ್ದು, ವೈಷಮ್ಯ ಹೊಂದಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೋಣಿಹಾಳ ಗ್ರಾಮದಲ್ಲಿಯೇ ಪೆÇಲೀಸರು ಬೀಡು ಬಿಟ್ಟಿದ್ದಾರೆ.
ಕೊಲ್ಹಾರ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.